ಆಸ್ಕರ್ ಸಮಿತಿಯಲ್ಲಿ ಭಾರತದ ಮೂವರಿಗೆ ಸ್ಥಾನ
ಮುಂಬೈ; ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಭಾರತದ ಮೂವರು ಕಲಾವಿದರಿಗೆ ಸ್ಥಾನ ಸಿಕ್ಕಿದೆ. ತಮಿಳಿನ ಖ್ಯಾತ ನಟ ಸೂರ್ಯ, ಬಾಲಿವುಡ್ ನ ಖ್ಯಾತ ನಟಿ ಕಾಜೋಲ್ ಮತ್ತು ನಿರ್ದೇಶಕಿ ರೀಮಾ ಕಗ್ತಿ ಆಯ್ಕೆಯಾಗಿದ್ದಾರೆ. ಸೂರ್ಯ ನಟನೆಯ ಜೈ ಭೀಮ್, ಸೂರರೈ ಪೊಟ್ರೊ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದವು. ಅದರಲ್ಲೂ ಜೈ ಭೀಮ್ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಆಸ್ಕರ್ ಕಮಿಟಿಗೆ ಆಯ್ಕೆ ಆಗುವ ಮೂಲಕ, ಈ ಗೌರವಕ್ಕೆ ಪಾತ್ರರಾದ ಮೊದಲ ದಕ್ಷಿಣದ ತಾರೆ ಎಂಬ ಹೆಗ್ಗಳಿಕೆ ಇವರು ಪಾತ್ರರಾಗಿದ್ದಾರೆ.
ನಿರ್ದೇಶಕ, ಬರಹಗಾರ ಸೇರಿದಂತೆ ಒಟ್ಟು ಆಸ್ಕರ್ ನಲ್ಲಿ 17 ಶಾಖೆಗಳು ಇರಲಿವೆ. ಅವುಗಳಲ್ಲಿ ಒಂದನ್ನು ಸೂರ್ಯ ಅವರು ಆಯ್ಕೆ ಮಾಡಿಕೊಳ್ಳಬೇಕಿದೆ. ಸೂರ್ಯ ಅವರು ಯಾವ ಶಾಖೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರದ್ದು. ನಟ, ನಿರ್ಮಾಪಕರೂ ಆಗಿರುವ ಸೂರ್ಯ ಬಹುಶಃ ಈ ಎರಡರ ಆಯ್ಕೆಯಲ್ಲಿ ಇರಬಹುದು ಎನ್ನಲಾಗುತ್ತಿದೆ.