LifestyleNational

ಪಾರ್ವತಿ ಕುಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ವಿಶೇಷ ಪೂಜೆ ಸಲ್ಲಿಕೆ

ಪಾರ್ವತಿ ಕುಂಡ; ಉತ್ತರಾಖಂಡದ ಪವಿತ್ರ ಯಾತ್ರಾಸ್ಥಳ ಪಾರ್ವತಿ ಕುಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಮುಂಜಾನೆ ಭೇಟಿ ನೀಡಿದ್ದರು. ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಡಮರುಗ ಬಾರಿಸಿ, ಶಂಖ ಊದಿದರು.

ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಪಾರ್ವತಿಕುಂಡದಲ್ಲಿ ವಿಶೇಷ ಭದ್ರತೆ ಏರ್ಪಡಿಸಲಾಗಿತ್ತು. ದೇಗುಲಕ್ಕೆ ಭೇಟಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ವಿಶೇಷ ವೇಷದಲ್ಲಿ ಆಗಮಿಸಿದ್ದರು. ಉತ್ತರಾಖಂಡದ ವಿಶೇಷ ವೇಷ ತೊಟ್ಟು ಬಂದಿದ್ದ ಮೋದಿಯವರು ವಿಶೇಷ ಪೂಜೆ ಸಲ್ಲಿಸಿದರು. ಅನಂತರ ಕೆಲಕಾಲ ಧ್ಯಾನ ಮಾಡಿದರು.

Share Post