LifestyleNational

ಸಿಕ್ಕಿಂನಲ್ಲಿ ದಿಢೀರ್‌ ಮೇಘ ಸ್ಫೋಟ; 23 ಸೈನಿಕರು ನಾಪತ್ತೆ

ಗ್ಯಾಂಗ್ಟಾಕ್: ಸಿಕ್ಕಿಂನ ಲೊನಾಕ್ ಸರೋವರದ ಸುತ್ತಮುತ್ತ ಭಾರಿ ಮೇಘಸ್ಫೋಟ ಸಂಭವಿಸಿದೆ. ಇದರಿಂದಾಗಿ ದಿಢೀರಾಗಿ ತೀಸ್ತಾ ನದಿಯಲ್ಲಿ  ಹಠಾತ್ ಪ್ರವಾಹ  ಉಂಟಾಗಿದೆ. ರಸ್ತೆಗಳೆಲ್ಲಾ ಕೊಚ್ಚಿಹೋಗಿವೆ. ಇದರಿಂದಾಗಿ 23 ಸೈನಿಕರು ನಾಪತ್ತೆಯಾಗಿದ್ದಾರೆ.

ಮೇಘಸ್ಫೋಟದಿಂದಾಗಿ ಚುಂಗ್ಥಾಂಗ್ ಅಣೆಕಟ್ಟೆ ಬಹುಬೇಗ ತುಂಬಿಬಿಟ್ಟಿದೆ. ಹಾಗೆಯೇ ಬಿಟ್ಟರೆ ಅಣೆಕಟ್ಟೆಗೆ ಅಪಾಯವಾಗುವ ಸಾಧ್ಯತೆ ಇತ್ತು. ಹಾಗಾಗಿ, ಅಣೆಕಟ್ಟೆಯಿಂದ ದಿಢೀರ್‌ ನೀರು ಹೊರಬಿಡಲಾಗಿದೆ. ಇದರಿಂದಾಗಿ ಪ್ರವಾಹ ಏರ್ಪಟ್ಟಿದೆ. ಹೀಗಾಗಿ ನದಿಯಲ್ಲಿ 15 ರಿಂದ 20 ಅಡಿ ನೀರು ಏರಿಕೆಯಾಗಿದೆ. ಹೀಗಾಗಿ, ಸಿಂಗ್ಟಾಮ್ ಬಳಿಯ ಬರ್ದಂಗ್‌ನಲ್ಲಿ ನಿಲ್ಲಿಸಲಾಗಿದ್ದ ಸೇನಾ ವಾಹನಗಳು ಕೊಚ್ಚಿಹೋಗಿವೆ. ಈ ಹಿನ್ನೆಲೆ 23 ಸೇನಾ ಸಿಬ್ಬಂದಿ ಕಾಣೆಯಾಗಿದ್ದಾರೆ. ಇನ್ನೂ ಕೆಲವು ವಾಹನಗಳು ಮುಳುಗಿವೆ ಎಂದು ತಿಳಿದುಬಂದಿದೆ.

 

Share Post