ಆಕೆಗೆ ಏಳು ಮಂದಿ ಗಂಡಂದಿರು..!; ಎಂಟನೇ ಮದುವೆಯಾಗಲು ಹೋಗಿ ಸಿಕ್ಕಿಬಿದ್ದಳು!
ರಾಜಸ್ಥಾನ; ಒಬ್ಬ ಮಹಿಳೆ ಈಗಾಗಲೇ ಏಳು ಮಂದಿಯನ್ನು ಮದುವೆಯಾಗಿದ್ದಳು.. ಆದರೂ ಆಕೆಗೆ ಆಸೆ ತೀರಿರಲಿಲ್ಲ.. ಹೀಗಾಗಿ ಎಂಟನೇಯವನನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಳು.. ಆದ್ರೆ ಯಾರಿಗೂ ಗೊತ್ತಿಲ್ಲದೆ ಏಳು ಮದುವೆಯಾಗಿದ್ದ ಆ ಹೆಣ್ಣು, ಎಂಟನೇ ಮದುವೆಯಾಗಲು ತಯಾರಿ ನಡೆಸಿದ್ದಾಗ ಸಿಕ್ಕಿಬಿದ್ದಿದ್ದಾಳೆ.. ಈಗ ಆಕೆ ಪೊಲೀಸರ ಅತಿಥಿಯಾಗಿದ್ದಾಳೆ..
ರಾಜಸ್ಥಾನದ ರತನ್‌ಗಢ ನಿವಾಸಿಯಾಗಿರುವ ಆ ಮಹಿಳೆಗೆ ಮದುವೆಯಾಗುವುದೇ ಕೆಲಸವಾಗಿತ್ತು.. ಆ ಮಹಿಳೆಗೆ ಈಗ ಮೂವರು ಮಕ್ಕಳು ಕೂಡಾ ಇದ್ದಾರೆ.. ಅಂದಹಾಗೆ ಈ ಮಹಿಳೆ ಕೆಲ ವರ್ಷಗಳ ಹಿಂದೆ ಮೊದಲ ಮದುವೆಯಾಗಿದ್ದಳು.. ಕೆಲ ವರ್ಷ ಆತನೊಂದಿಗೆ ಸಂಸಾರ ನಡೆಸಿದ್ದಳು.. ಇದರ ಪ್ರತಿಫಲವೇ ಮೂವರು ಮಕ್ಕಳು.. ಅನಂತರ ಆಕೆ ಪತಿಗೆ ವಿಚ್ಛೇದನ ನೀಡಿದ್ದಳು.. ಅನಂತರ ಮದುವೆಯಾಗುವುದೇ ಒಂದು ದಂಧೆಯನ್ನಾಗಿ ಮಾಡಿಕೊಂಡಿದ್ದಳು..
ಶ್ರೀಮಂತ ಹುಡುಗರನ್ನು ಬಲೆಗೆ ಬೀಳಿಸುತ್ತಿದ್ದ ಆ ಮಹಿಳೆ, ಅವರನ್ನು ಶಾಸ್ತ್ರೋಕ್ತವಾಗಿ ಮದುವೆಯಾಗುತ್ತಿದ್ದಳು.. ಅನಂತರ 10-15 ದಿನ ಆತನ ಮನೆಯಲ್ಲಿರುತ್ತಿದ್ದಳೆ.. ಅನಂತರ ಸಮಯ, ಸಂದರ್ಭ ನೋಡಿಕೊಂಡು ಗಂಡನ ಮನೆಯಲ್ಲಿರುವ ಹಣ, ಚಿನ್ನಾಭರಣಗಳನ್ನೆಲ್ಲಾ ದೋಚಿಕೊಂಡು ಪರಾರಿಯಾಗುತ್ತಿದ್ದಳು.. ಹೀಗೆ ಇದುವರೆಗೆ ಏಳು ಮಂದಿಯನ್ನು ಮದುವೆಯಾಗಿ ಎಲ್ಲರಿಗೂ ವಂಚನೆ ಮಾಡಿದ್ದಳು..
ಈ ಮಹಿಳೆ ಇತ್ತೀಚೆಗೆ ಅಂದರೆ ಏಪ್ರಿಲ್ 8ರಂದು ಬಿಕಾನೇರ್ನ ಲುಂಕಾರನ್ಸರ್ ನಿವಾಸಿ ವೀರ್ಪಾಲ್ ಅವರನ್ನು ಮದುವೆಯಾಗಿದ್ದಳು.. 20 ದಿನಗಳ ಕಾಲ ಆತನ ಜೊತೆಯಲ್ಲಿದ್ದ ಆಕೆ ರಾತ್ರೋ ರಾತ್ರಿ ಚಿನ್ನಾಭರಣ ಹಾಗೂ ಹಣದೊಂದಿಗೆ ಎಸ್ಕೇಪ್ ಆಗಿದ್ದರು.. ಅನಂತರ ಈಗ ಎಂಟನೇ ಮದುವೆಗೆ ಎಲ್ಲಾ ಸಿದ್ಧತೆಗಳೂ ನಡೆದಿದ್ದವು.. ಒಳ್ಳೆಯ ಕುಳಾನೇ ಆಕೆಯ ಬಲೆಗೆ ಬಿದ್ದಿದ್ದ.. ಆದ್ರೆ ಮದುವೆಗೆ ತಯಾರಿ ನಡೆದಿರುವಾಗಲೇ ಪೊಲೀಸರಿಗೆ ಮಾಹಿತಿ ಸಿಕ್ಕಿ ಆಕೆಯನ್ನು ಬಂಧಿಸಿದ್ದಾರೆ..
ಆರೋಪಿ ಮಹಿಳೆ ಗ್ಯಾಂಗ್ ಒಂದನ್ನು ಕಟ್ಟಿಕೊಂಡಿದ್ದು, ಲಾರಿ ಡ್ರೈವರ್‌ಗಳನ್ನು ಕೂಡಾ ದೋಚುತ್ತಿದ್ದಳು ಎಂದು ತಿಳಿದುಬಂದಿದೆ..