ಬೂಸ್ಟರ್ ಡೋಸ್ ಅಗತ್ಯತೆಯ ಅಧ್ಯಯನ ನಡೆಸಿ – ಪ್ರಧಾನಿ ಮೋದಿ
ನವದೆಹಲಿ : ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಅಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆ ಬೂಸ್ಟರ್ ಡೋಸ್ ಬೇಕೆಂದು ಸಾಕಷ್ಟು ಮನವಿಗಳು ಕೇಳಿಬರುತ್ತಿವೆ. ಇದಲ್ಲದೇ ಕೆಲವು ರಾಷ್ಟ್ರಗಳು ಈಗಾಗಲೇ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ಸೂಚಿಸಿದೆ. ಈಗ ನಮ್ಮ ರಾಷ್ಟ್ರದಲ್ಲಿಯೂ ಇದು ಅನಿವಾರ್ಯವೆಂಬಂತೆ ಬಿಂಬಿತವಾಗುತ್ತಿರುವ ಕಾರಣ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ. ಪರಿಶೀಲನೆ ನಡೆಸಿ, ಬೂಸ್ಟರ್ ಡೋಸ್‍ನ ಅಗತ್ಯತೆ, ಸಾಧಕ ಬಾಧಕಗಳ ಬಗ್ಗೆ ವಿಸ್ತೃತ ವರದಿ ನೀಡಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
ಡಿಪಾರ್ಟ್‌ಮೆಂಟ್ ಆಫ್ ಬೈಯೋಟೆಕ್ನಾಲಜಿಯ ಪ್ರೀಮಿಯರ್ ಇನ್‍ಸ್ಟಿಟ್ಯೂಟ್ ಟ್ರಾನ್ಸ್‌ಲೇಶನಲ್ ಹೆಲ್ತ್ ಸೈನ್ಸ್ ಅಂಡ್ ಟೆಕ್ನಾಲಜಿ ಇನ್‍ಸ್ಟಿಟ್ಯೂಟ್ (ಟಿಎಚ್‍ಎಸ್‍ಟಿಐ ) ಸಹಭಾಗಿತ್ವದಲ್ಲಿ ಈ ಅಧ್ಯೈನ ನಡೆಯಲಿದೆ. ಅಧ್ಯಯನದಲ್ಲಿ ಮೂರು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಅಧ್ಯಯನ ಮುಗಿದ ಬಳಿಕವಷ್ಟೇ ಬೂಸ್ಟರ್ ಡೋಸ್ ಕೊಡಬೇಕಾ ಬೇಡವಾ, ಕೊಟ್ಟರೂ ಯಾವುದನ್ನು ಕೊಡಬೇಕು ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.