National

ಮೂವರು ಅಂತಾರಾಜ್ಯ ಡ್ರಗ್‌ ಪೆಡ್ಲರ್‌ಗಳು ಅರೆಸ್ಟ್‌

ನವದೆಹಲಿ: ಮೂವರು ಅಂತಾರಾಜ್ಯ ಡ್ರಗ್‌ ಪೆಡ್ಲರ್‌ಗಳನ್ನು ಗಾಜಿಯಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂಧ 110ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ನೌರಂಗಿ ಲಾಲ್ (30), ವೀರು (30) ಮತ್ತು ಅನ್ವರ್ (32) ಎಂದು ಗುರುತಿಸಲಾಗಿದೆ. ಇವರ ಸಹಚರರಲ್ಲಿ ಒಬ್ಬನಾದ ನಾಗೇಂದ್ರ (35) ಎಂಬಾತ ತಲೆಮರೆಸಿಕೊಂಡಿದ್ದಾನೆ.
ಗಾಂಜಾ ಸಾಗಿಸಲು ಬಳಸುತ್ತಿದ್ದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ (ಅಪರಾಧ) ದೀಕ್ಷಾ ಶರ್ಮಾ ತಿಳಿಸಿದ್ದಾರೆ. ವಿಚಾರಣೆ ಸಮಯದಲ್ಲಿ, ಆರೋಪಿಗಳು ಒಡಿಶಾದಲ್ಲಿ ಗಾಂಜಾ ಖರೀದಿ ಮಾಡಿ, ದೆಹಲಿಯಲ್ಲಿ ಮಾರಾಟ ಮಾಡುತ್ತಿದ್ದರೆಂದು ವಿಚಾರ ವೇಳೆ ತಿಳಿದುಬಂದಿದೆ. ಒಡಿಶಾದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share Post