HealthNational

ಕುನೋ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು; 20ರಲ್ಲಿ 9 ಸಾವು..!

ಭೋಪಾಲ್; ಮಧ್ಯಪ್ರದೇಶ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿದ್ದ 20 ಚೀತಾಗಳ ಪೈಕಿ ಇದುವರೆಗೆ 9 ಚೀತಾಗಳು ಸಾವನ್ನಪ್ಪಿವೆ. ಇಂದು ಬೆಳಗ್ಗೆ ಹೆಣ್ಣು ಚೀತಾ ಧಾತ್ರಿ ಶವಾವಾಗಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಂತರ ಘಟನೆಗೆ ಕಾರಣ ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಈ ಮೊದಲು ಚೀತಾಗಳು ಇದ್ದವು. ಆದ್ರೆ ದಶಕಗಳ ಹಿಂದೆಯೇ ಚೀತಾಗಳ ಸಂತತಿ ಭಾರತದಲ್ಲಿ ನಶಿಸಿಹೋಗಿದ್ದವು. ಹೀಗಾಗಿ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಕಳೆದ ವರ್ಷ 20 ಚೀತಾಗಳನ್ನು ತರಿಸಲಾಗಿತ್ತು.

ಆದ್ರೆ ಚೀತಾಗಳು ಸಾವನ್ನಪ್ಪುತ್ತಲೇ ಇವೆ. ಮೂರು ಮರಿಗಳು ಸೇರಿ ಇದುವರೆಗೆ ಒಂಭತ್ತು ಚೀತಾಗಳು ಸಾವನ್ನಪ್ಪಿವೆ. ಇನ್ನು 11 ಚೀತಾಗಳು ಉಳಿದಿದ್ದು, ಅವುಗಳನ್ನು ಉಳಿಸಿಕೊಳ್ಳಲು ಅಧಿಕಾರಿಗಳು ಪರದಾಡುವಂತಾಗಿದೆ.

 

Share Post