National

ವಿಚಾರಣೆಗೆ ಹಾಜರಾದ ಸೋನಿಯಾಗಾಂಧಿ; ಜೋರಾಯ್ತು ಪ್ರತಿಭಟನೆ

ನವದೆಹಲಿ; ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿಯವರು ಎರಡನೇ ಸುತ್ತಿನ ವಿಚಾರಣೆಗೆ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಪುತ್ರಿ ಪ್ರಿಯಾಂಕಾ ವಾಧ್ರಾ ಜೊತೆ ಸೋನಿಯಾಗಾಂಧಿ ಇಡಿ ಕಚೇರಿಗೆ ಆಗಮಿಸಿದ್ದಾರೆ. ಈಗಾಗಲೆ ಇಡಿ ಅಧಿಕಾರಿಗಳು ಸೋನಿಯಾ ವಿಚಾರಣೆ ಆರಂಭಿಸಿದ್ದಾರೆ. ಮಹಿಳಾ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಈ ವಿಚಾರಣೆ ನಡೆಯುತ್ತಿದೆ.

 

ಜುಲೈ 21 ರಂದು ಕೂಡಾ ಸೋನಿಯಾಗಾಂಧಿಯವರ ವಿಚಾರಣೆ ನಡೆಸಲಾಗಿತ್ತು. ಅಂದು ಸೋನಿಯಾ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರು. ಇನ್ನು ಸೋನಿಯಾ ಗಾಂಧಿ ವಿಚಾರಣೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ದೆಹಲಿಯ ಕಾಂಗ್ರೆಸ್‌ ಕಚೇರಿ ಹಾಗೂ ಇಡಿ ಕಚೇರಿ ಬಳಿ ಯುವ ಕಾಂಗ್ರೆಸ್‌ ಹಾಗೂ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದದಾರೆ. ಮಹಿಳಾ ಕಾರ್ಯಕರ್ತೆಯರು ಕಪ್ಪು ಬಲೂನ್‌ಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share Post