National

ಸಹೋದ್ಯೋಗಿಗಳ ಮೇಲೆ ಪೊಲೀಸ್‌ ಫೈರಿಂಗ್‌; ಇಬ್ಬರ ಸಾವು

ನವದೆಹಲಿ: ದೆಹಲಿಯ ಹೈದರ್​​ಪುರ ಪ್ರದೇಶದಲ್ಲಿ ಸಿಕ್ಕಿಂ ಪೊಲೀಸ್ ಸಿಬ್ಬಂದಿಯೊಬ್ಬ ಮೂವರು ಸಹದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

 

    ಘಟನೆಯಲ್ಲಿ ಮತ್ತೊಬ್ಬರು ಗಾಯಗೊಂಡಿದ್ದು, ಅಂಬೇಡ್ಕರ್​​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಂಡು ಹಾರಿಸಿರುವ ಪೊಲೀಸ್ ಸಿಬ್ಬಂದಿಯ ಬಂಧನ ಮಾಡಲಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರೆದಿದೆ.

Share Post