National

ರೋಹಿಣಿ ಕೋರ್ಟ್‌ ಆವರಣದಲ್ಲಿ ವಕೀಲನ ಮೇಲೆ ಗುಂಡಿನ ದಾಳಿ..!

ನವದೆಹಲಿ: ದೆಹಲಿಯ ರೋಹಿಣಿ ಕೋರ್ಟ್‌ ಆವರಣದಲ್ಲಿ ಒಂದಿಲ್ಲೊಂದು ಅಹಿತಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದರಂತೆ ಇವತ್ತೂ ಕೂಡಾ ಈ ಕೋರ್ಟ್‌ ಆವರಣದಲ್ಲಿ  ಗುಂಡಿನ ಸದ್ದು ಕೇಳಿ ಬಂದಿದೆ. ಕೋರ್ಟ್‌ ಆವರಣ ಪ್ರವೇಶ ದ್ವಾರದಲ್ಲಿ ಭದ್ರತಾ ತಪಾಸಣೆ ವೇಳೆ ಭದ್ರತಾ ಅಧಿಕಾರಿ ಹಾಗೂ ವಕೀಲರೊಬ್ಬರ ನಡುವೆ ಗಲಾಟೆ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ವಕೀಲನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಆದ್ರೆ ವಕೀಲರು ಸ್ವಲ್ಪದಲ್ಲೇ ಅಪಾಯದಿಂದ ಪಾರಾಗಿದ್ದಾರೆ.

    2021ರ ಸೆಪ್ಟಂಬರ್​ ಕೊನೆ ವಾರದಲ್ಲಿ ರೋಹಿಣಿ ಕೋರ್ಟ್​ ಆವರಣದಲ್ಲಿ ಶೂಟೌಟ್ ನಡೆದಿತ್ತು. ಈ ಗುಂಡಿನ ಸಂಘರ್ಷದಲ್ಲಿ ಮೂವರು ಬಲಿಯಾಗಿದ್ದರು. ಗ್ಯಾಂಗ್​ಸ್ಟರ್​ ಜಿತೇಂದ್ರ ಗೋಗಿ ಸೇರಿ ಮೂವರು ಮೃತಪಟ್ಟಿದ್ದರು. ಇದಲ್ಲದೆ ಇಲ್ಲಿ ಒಂದು ಸ್ಫೋಟ ಕೂಡಾ ಸಂಭವಿಸಿತ್ತು ಎನ್ನಲಾಗಿದೆ.

Share Post