ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಟ್ವಿಸ್ಟ್
ಮುಂಬೈ : ದಶಕಗಳ ಹಿಂದೆ ತೀವ್ರ ಕೂತುಹಲ ಮೂಡಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸ್ವಂತ ಮಗಳು ಕೊಂದು ಜೈಲು ಶಿಕ್ಷೆ ಅನುಭವಿಸುತ್ತಿರುವ ಇಂದ್ರಾಣಿ ಮುಖರ್ಜಿ ಈಗ ದಶಕಗಳ ಬಳಿಕ ಶೀನಾ ಬೋರಾ ಬದುಕಿದ್ದಾಳೆ. ಆಕೆ ಕಾಶ್ಮೀರದಲ್ಲಿ ಇದ್ದು, ಆಕೆಯನ್ನು ಪತ್ತೆ ಮಾಡಬೇಕು ಎಂದು ಸಿಬಿಐಗೆ ಪತ್ರ ಬರೆದಿದ್ದಾಳೆ. ಈ ಮೂಲಕ 2012ರ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. 2012ರಲ್ಲಿ ಇಂದ್ರಾಣಿ ಮುಖರ್ಜಿಯೇ ತನ್ನ ಗಂಡನ ಜೊತೆ ಸೇರಿ ಶೀನಾ ಬೋರಾ ಹತ್ಯೆ ಮಾಡಿದ್ದಳು. ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಇಂದ್ರಾಣಿ ಮುಖರ್ಜಿಗೆ ಶಿಕ್ಷೆ ವಿಧಿಸಿದ್ದು, ಟಿವಿ ಜಗತ್ತಿನ ಖ್ಯಾತ ಉದ್ಯಮಿಯಾಗಿದ್ದ ಇಂದ್ರಾಣಿ ಮುಖರ್ಜಿ 2015ರಲ್ಲಿ ಮುಂಬೈ ಜೈಲು ಸೇರಿದಳು.ಇದೀಗ ಸೆರೆವಾಸದಲ್ಲಿರುವ ಇಂದ್ರಾಣಿ ಮುಖರ್ಜಿ ಶೀನಾ ಬೋರಾ ಬದುಕಿರುವ ಸಾಧ್ಯತೆ ಕುರಿತು ಸಿಬಿಐಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಮಹಿಳೆಯೊಬ್ಬರು ತಮ್ಮನ್ನು ಜೈಲಿಯಲ್ಲಿ ಭೇಟಿಯಾಗಿದ್ದು,
ಆಕೆ ಶೀನಾ ಬೋರಾ ಬದುಕಿದ್ದು, ಆಕೆಯನ್ನು ಕಾಶ್ಮೀರದಲ್ಲಿ ಭೇಟಿ ಮಾಡಿರುವುದಾಗಿ ತಿಳಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ತನಿಖೆ ಮಾಡುವಂತೆ ಸಿಬಿಐಗೆ ಒತ್ತಾಯಿಸಿದ್ದಾರೆ.