National

ಪುರಿ ಜಗನ್ನಾಥ ದರ್ಶನಕ್ಕೆ ಕೋವಿಡ್ ಲಸಿಕೆ ಕಡ್ಡಾಯವಲ್ಲ

ಪುರಿ : ರಾಷ್ಟ್ರದಾದ್ಯಂತ ಕೋವಿಡ್‌ ಸೋಂಕು ಇಳಿಕೆಯಾಗುತ್ತಿದೆ. ಮೂರನೇ ಅಲೆ ಬಂದರೂ ಕೂಡ ದೊಡ್ಡ ಮಟ್ಟದ ತೊಂದರೆಯನ್ನೇನು ಮಾಡಿಲ್ಲ. ಈ ಕಾರಣದಿಂದ ಜಗನ್ನಾಥ ದೇಗುಲಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಲಸಿಕೆ ಕಡ್ಡಾಯ ನಿಯಮವನ್ನು ಫೆಬ್ರುವರಿ 21ರಿಂದ ರದ್ದುಗೊಳಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ.

ಈ ಮುಂಚೆ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಎರಡು ಡೋಸ್‌ ಕೋವಿಡ್‌ ಲಸಿಕೆ ಹಾಕಿಸಿರುವ ಸರ್ಟಿಫಿಕೇಟ್‌ ಅಥವಾ ಆರ್‌ಟಿಪಿಸಿಆರ್‌ ನೆಗೆಟೀವ್‌ ರಿಪೋರ್ಟ್‌ ತೋರಿಸಬೇಕಿತ್ತು. ಆದರೆ ಈಗ ಈ ನಿಯಮವನ್ನು ಹಿಂಪಡೆಯಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿಸಿದೆ.

ಈಗಾಗಲೇ ಸಾಕಷ್ಟು ಜನರು ಕೋವಿಡ್‌ ಲಸಿಕೆಯನ್ನು ಪಡೆದಿದ್ದಾರೆ. ಇನ್ನು ಸೋಂಕಿನ ಸಂಖ್ಯೆ ಕೂಡ ಇಳಿದಿದೆ. ಇದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಫೆ.21 ರಿಂದ ಸಾರ್ವಜನಿಕರು ಯಾವುದೇ ಲಸಿಕೆ ಪ್ರಮಾಣ ಪತ್ರ ತೋರಿಸದೆ ದೇವರ ದರ್ಶನ ಪಡೆಯಬಹುದಾಗಿದೆ.

Share Post