CrimeNational

ಹೆಂಡತಿಯ ಲೈಂಗಿಕ ಕಿರುಕುಳ; ಗಂಡ ಆತ್ಮಹತ್ಯೆಗೆ ಯತ್ನ!

ಅಮರಾವತಿ; ಗಂಡ ಹಾಗೂ ಗಂಡನ ಮನೆಯವರ ಕಿರುಕುಳದಿಂದ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಸಾಕಷ್ಟು ನಡೆದಿವೆ.. ಆದ್ರೆ ಇದು ಅದಕ್ಕೆ ವಿರುದ್ಧವಾದುದು.. ಪತ್ನಿಯ ಲೈಂಗಿಕ ಕಿರುಕುಳ ತಾಳಲಾರದೇ ಪತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.. ಆಂಧ್ರಪ್ರದೇಶದ ಕಾಕಿನಾಡದಲ್ಲಿ ಈ ಘಟನೆ ನಡೆದಿದೆ..

  ಕಾಕಿನಾಡ ನಗರದ ವ್ಯಕ್ತಿಯೊಬ್ಬ ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.. ಆ ಡೆತ್ ನೋಟ್ ನಲ್ಲಿ ಪತ್ನಿ ರಾತ್ರಿಯಾದರೆ ಹೇಗೆಲ್ಲ ಲೈಂಗಿಕ ಕಿರುಕುಳ ನೀಡುತ್ತಾಳೆ.. ಪೀಡಿಸುತ್ತಾಳೆ.. ಆಕೆಯ ಮನೆಯವರು ಹೇಗೆಲ್ಲ ಕಿರುಕುಳ ನೀಡುತ್ತಾರೆ ಎಂಬುದನ್ನು ಬರೆದಿದ್ದಾರೆ..

    ಇನ್ನು ಪತ್ನಿಯ ನಡತೆ ಬಗ್ಗೆಯೂ ಆತ ಹೇಳಿಕೊಂಡಿದ್ದಾನೆ.. ಆಕೆಯ ನಡತೆ ಚೆನಾಗಿಲ್ಲ.. ತನ್ನ ಸೋದರಮಾವನ ಜೊತೆ ಸಂಬಂಧ ಮುಂದುವರೆಸಿದ್ದಾಳೆ.. ಅಕ್ಕ ಪಕ್ಕದವರ ಬಳಿ ನನ್ನ ಮುದಲಿಸುವಂತೆ ಮಾತನಾಡುತ್ತಾಳೆ ಎಂದು ಗೋಳು ತೋಡಿಕೊಂಡಿದ್ದಾರೆ..

  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ..

 

Share Post