ಗಂಡ ಸೀರೆ ಕೊಡಿಸಿಲ್ಲ ಅಂತ ಮಹಿಳೆ ಆತ್ಮಹತ್ಯೆ!
ಜಾರ್ಖಂಡ್; ಹಬ್ಬಕ್ಕೆ ಗಂಡ ಹೊಸ ಸೀರೆ ಕೊಡಿಸಿಲ್ಲ ಅಂತ ಮಹಿಳೆಯೊಬ್ಬರು ಬೇಜಾರು ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.. ಜಾರ್ಖಂಡ್ ನ ದುಮ್ಕಾ ಜಿಲ್ಲೆಯ ಬಾಗ್‌ಜೋಪಾ ಗ್ರಾಮದಲ್ಲಿ ಈ ಘಟನೆ ನಡೆದಿದೆ..
26 ವರ್ಷದ ಸೆಂಡೋದೇವಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ. ಈಕೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ದಸರಾಗೆ ಗಂಡ ಸೀರೆ ಕೊಡಿಸದಿದ್ದಕ್ಕೆ ಈಕೆ ಬೇಜಾರು ಮಾಡಿಕೊಂಡಿದ್ದಳು. ಗಂಡನ ಜೊತೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..
ಮೃತ ಮಹಿಳೆಯ ಪತಿ ಟ್ರ್ಯಾಕ್ಟರ್ ಡ್ರೈವರ್ ಆಗಿದ್ದು, ಪತ್ನಿಗೆ ಸೀರೆ ತಂದು ಕೊಡಲು ಆಗಿಲ್ಲ.. ಹಣ ಇರದ ಕಾರಣ ಹಬ್ಬಕ್ಕೆ ಬಟ್ಟೆ ತಂದಿರಲಿಲ್ಲ.. ಇದರಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ..