ಸಂಸದ್ ಟಿವಿಯ ಯೂಟ್ಯೂಬ್ ಖಾತೆ ರದ್ದು : ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆ
ಯುಟ್ಯೂಬ್ ಸಂಸದ್ ಟಿವಿಯ ಖಾತೆಯನ್ನು ರದ್ದುಗೊಳಿಸಿದೆ. ಯುಟ್ಯೂಬ್‌ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಕ್ಕೆ ಈ ಖಾತೆಯನ್ನು ನಿಷ್ಕ್ರಿಯಗೊಳಿಸಿದೆ.
ರಾಜ್ಯ ಸಭೆ ಮತ್ತು ಲೋಕ ಸಭೆಯ ವಿಷಯಗಳನ್ನು ಪ್ರಸಾರ ಮಾಡುತ್ತಿದ್ದ ಸಂಸದ್ ಟಿವಿಯ ಚಾನೆಲ್ ಅನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಈ ಮಾಹಿತಿ ತಿಳಿದುಬಂದಿದೆ.
ವರದಿಗಳ ಪ್ರಕಾರ ಸಂಸದ್ ಟಿವಿಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಹೆಸರನ್ನು ethereum ಎಂದು ಬದಲಿಸಲಾಗಿದೆ ಎಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಗೂಗಲ್ ಅವರಿಗೆ ಮೇಲ್ ಮಾಡಿದ್ದರೂ ಕೂಡ ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕೂಡ ವರದಿ ಆಗಿದೆ. ಯೂಟ್ಯೂಬ್ ಕಮ್ಯುನಿಟಿಯ ಮಾರ್ಗಸೂಚಿಗಳು ನಮ್ಮ ಸುರಕ್ಷತೆಗಾಗಿಯೇ ಮಾಡಲಾಗಿದೆ. ಎಲ್ಲರಿಗೂ ಈ ಮಾರ್ಗಸೂಚಿಗಳು ಒಂದೇ ಇರುತ್ತದೆ.