Bengaluru

ಹಿಜಾಬ್ ಪ್ರಸ್ತಾಪಕ್ಕೆ ಶೂನ್ಯ ವೇಳೆಯಲ್ಲಿ ಸಮಯ ನೀಡದ ಸಭಾಪತಿ-ಕಲಾಪದಿಂದ ಹೊರನಡೆದ ಇಬ್ರಾಹಿಂ

ಬೆಂಗಳೂರು:  ವಿಧಾನಪರಿಷತ್ ಅಧಿವೇಶನದಲ್ಲಿ ಹಿಜಾಬ್‌ ವಿವಾದ ಪ್ರಸ್ತಾಪಕ್ಕೆ ಪರಿಷತ್‌ ಸದಸ್ಯ ಸಿಎಂ ಇಬ್ರಾಹಿಂ ಸಮಯ ಕೇಳಿದ್ರು. ಶೂನ್ಯ ವೇಳೆಯಲ್ಲಿ ಹಿಜಾಬ್‌ ವಿಚಾರವನ್ನು ಪ್ರಸ್ತಾಪ ಮಾಡಲು ಸಭಾಪತಿಯವರ ಬಳಿ ಸಮಯ ಕೇಳಿದ್ದಾರೆ. ಇಬ್ರಾಹಿಂ ಮನವಿಗೆ ಸಭಾಪತಿ ಬಸವರಾಜ್‌ ಹೊರಟ್ಟಿಯವರು ಅವಕಾಶ ನೀಡದ ಹಿನ್ನೆಲೆಯಲ್ಲಿ ಕೋಪಗೊಂಡು ಇಬ್ರಾಹಿಂ ಕಲಾಪದಿಂದ ಹೊರನಡೆದಿದ್ದಾರೆ.

ಅವಕಾಶ ನೀಡದ ಹಿನ್ನೆಲೆ ಸಿಟ್ಟಿಗೆದ್ದ ಇಬ್ರಾಹಿಂ ಯಾಕೆ ತಾರತಮ್ಯ ಮಾಡ್ತಿದ್ದೀರಿ, ಸೆನ್ಸೇಷನ್‌ ಕ್ರಿಯೇಟ್‌ ಆಗುತ್ತೆ ಅಂತ ಅವಕಾಶ ನೀಡ್ತಲ್ವಾ..? ಹಿಜಾಬ್‌ ಪ್ರಸ್ತಾಪಕ್ಕೆ ನಾಳೆ ಅವಕಾಶ ಕೊಡ್ತಿರೋ..ನಾಡಿದ್ದೋ..ಪರಿಷತ್‌ನಲ್ಲಿ ನಾನು ಎಷ್ಟು ದಿನ ಇರ್ತಿನೋ ಗೊತ್ತಿಲ್ಲ. ನಾನು ಇದ್ದಾಗಲೇ ಹಿಜಾಬ್‌ ಬಗ್ಗೆ ಮಾತನಾಡಬೇಕು ಎಂದು ಪಟ್ಟು ಹಿಡಿದ್ರು.

ಇಬ್ರಾಹಿಂ ಮಾತಿಗೆ ಸಭಾಪತಿ ಬಸವರಾಜ್‌ ಹೊರಟ್ಟಿಯವರು ಪ್ರತಿಕ್ರಿಯಿಸಿ ನಾವು ಯಾವುದಕ್ಕೂ ಹಿಂಜರಿದಿಲ್ಲ. ಇವತ್ತಿನ ಅಜೆಂಡಾದಲ್ಲಿ ಈ ಬಗ್ಗೆ ಸೇರಿಸಿಲ್ಲ ಅಷ್ಟೇ ಎಂದು ಉತ್ತರ ನೀಡಿದ್ದಾರೆ. ಸಭಾಪತಿಯವರ ಮಾತಿನಿಂದ ಸಿಟ್ಟಿಗೆದ್ದು ವಿಧಾನಪರಿಷತ್‌ ಕಲಾಪದಿಂದ ಸಿಎಂ ಇಬ್ರಾಹಿಂ ಹೊರನಡೆದಿದ್ದಾರೆ.

Share Post