National

ಸಾಯಿತೇಜಾ ಅಂತಿಮ ಯಾತ್ರೆಗೆ ಸಿದ್ಧತೆ; ಯೋಧನ ಗ್ರಾಮದಲ್ಲಿ ಮಡುಗಟ್ಟಿದ ದುಃಖ

ಚಿತ್ತೂರು: ಮದನಪಲ್ಲಿ ತಾಲ್ಲೂಕಿನ ಎಗುವ ರೇಗಡ ಗ್ರಾಮದಲ್ಲಿ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ ಲೆಫ್ಟಿನೆಂಟ್‌ ಸಾಯಿತೇಜಾ ಅವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗಿದೆ.

ಸಾಯಿತೇಜಾ ಅವರು ದುರಂತದಲ್ಲಿ ಹಠಾತ್‌ ಸಾವನ್ನಪ್ಪಿದ್ದರಿಂದಾಗಿ ಇಡೀ ಗ್ರಾಮವೇ ದುಃಖಿಸುತ್ತಿದೆ. ಸಾಯಿತೇಜಾ ಅವರ ಪಾರ್ಥೀವ ಶರೀರ ಇನ್ನೂ ಗ್ರಾಮಕ್ಕೆ ಬಂದಿಲ್ಲ. ಗ್ರಾಮದ ಜನರೆಲ್ಲಾ ದುಃಖದಲ್ಲಿ ಮುಳುಗಿದ್ದಾರೆ. ಈ ನಡುವೆ ಆಂಧ್ರಪ್ರದೇಶ ಸರ್ಕಾರ, ಸಾಯಿತೇಜಾ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಿದೆ.
ಸಾಯಿತೇಜ ಅವರ ಸ್ನೇಹಿತರು ಕೂಡಾ ಸಾಯಿತೇಜಾ ಅವರ ಅಂತಿಮ ಯಾತ್ರೆಗೆ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಇಡೀ ಊರಿಗೆ ಊರೇ ಮೌನಕ್ಕೆ ಜಾರಿದೆ.

ಸಾಯಿತೇಜಾ ಅವರು 2013ರಲ್ಲಿ ಸೇನೆಗೆ ಸೇರಿದ್ದರು. ಹಂತ ಹಂತವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.  ಇತ್ತೀಚೆಗೆ ಅವರು ಸೇನಾಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಅವರ ಸೆಕ್ಯೂರಿಟಿ ಆಫೀಸರ್‌ ಆಗಿ ನೇಮಕವಾಗಿದ್ದರು.

ಸೇಯಿತೇಜಾ ಅವರು ಶ್ಯಾಮಲಾ ಎಂಬುವವರನ್ನು ಮದುವೆಯಾಗಿದ್ದರು. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮೂರು ವರ್ಷದ ಮೋಕ್ಷಜ್ಞ ಹಾಗೂ ಒಂದೂವರೆ ವರ್ಷದ ದರ್ಶಿನಿ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಸಾಯಿತೇಜಾ ಅವರ ತಂದೆಯವರು ಕೃಷಿಕರಾಗಿದ್ದರೂ, ತಮ್ಮ ಮಗ ಸೈನ್ಯಕ್ಕೆ ಸೇರಬೇಕೆಂದು ಬಯಸಿದ್ದರು. ತಂದೆಯ ಆಸೆಯಂತೆ ಸಾಯಿತೇಜಾ ಸೈನ್ಯಕ್ಕೆ ಸೇರಿದ್ದರು.

Share Post