National

ಗಣರಾಜ್ಯೋತ್ಸವ ಸಮಾರೋಪ ; ಸಾವಿರ ಡ್ರೋನ್‌ಗಳ ಲೈಟ್‌ ಶೋ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಣರಾಜ್ಯೋತ್ಸವ ಸಮಾರೋಪ ಸಮಾರಂಭ ನಡೆಯುತ್ತಿದೆ. ವಿಜಯ್‌ ಚೌಕ್‌ನಲ್ಲಿ ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಭಾಗಿಯಾಗಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿ ರಾಷ್ಟ್ರಪತಿ ಕೋವಿಂದ್‌ ಗೌರವ ವಂದನೆ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಹಲವು ಗಣ್ಯರು, ಮೂರು ಸೇನೆಗಳ ಮುಖ್ಯಸ್ಥರು ಭಾಗವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಹತ್ತು ನಿಮಿಷಗಳ ಕಾಲ ಡ್ರೋನ್‌ ಲೈಟ್‌ ಶೋ ಕೂಡಾ ಏರ್ಪಡಿಸಲಾಗಿದೆ.  ಸಾವಿರಕ್ಕೂ ಹೆಚ್ಚು ಡ್ರೋನ್‌ಗಳನ್ನು ಬಳಸಿ ಲೈಟ್‌ ಶೋ ನಡೆಸಲಾಗುತ್ತದೆ.

 

Share Post