ಸನ್ಮಾನ ಮಾಡುವ ವೇಳೆ ವೇದಿಕೆಯಿಂದ ಕುಸಿದು ಬಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಪಂಜಾಬ್: ಹತ್ತಿರದಲ್ಲೇ ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಪಕ್ಷವನ್ನು ಪ್ರತಿನಿಧಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಂಜಾಬ್‌ನ ಫರೀದ್ ಕೋಟ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡರು. ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಾಲಾರ್ಪಣೆ ಮಾಡಿದ್ರು. ಈ ವೇಳೆ ವೇದಿಕೆಯಿಂದ ರಾಜನಾಥ್ ಸಿಂಗ್ ಏಕಾಏಕಿ ಕುಸಿದು ಬಿದ್ದಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ರಕ್ಷಣಾ ಸಚಿವ ರಾಜನಾಥ್ ಅವರ ಪಂಜಾಬ್ ಚುನಾವಣಾ ಪ್ರಚಾರದ ವೇಳೆ ಅವರಿಗೆ ಬೃಹತ್ ಹಾರ ಹಾಕಲು ಬಿಜೆಪಿ ಕಾರ್ಯಕರ್ತರು ಮುಂದಾದರು. ಈ ವೇಳೆ ಎಲ್ಲರೂ ಫೋಟೋ ಗೆತೆಸಿಕೊಲ್ಳು ತೀರಾ ಹತ್ತಿರ ನಿಂತರು. ಈ ವೇಳೆ ರಾಜನಾಥ್ ಸಿಂಗ್‌ರನ್ನು ಮುಂದಿನಿಂದ ಒಬ್ಬ ಕಾರ್ಯಕರ್ತ ಅವರನ್ನು ತಳ್ಳಿದ್ದಾನೆ. ಕೂಡಲೇ ಅವರು ಹಿಂದೆ ಇದ್ದ ಸೋಫಾ ಮೇಲೆ ಬಿದ್ದಿದ್ದಾರೆ. ಒಮ್ಮೆಲೇ ತಾಳ್ಮೆ ಕಳೆದುಕೊಂಡ ರಾಜನಾಥ್, ಕೂಡಲೇ ಹಾರ ತೆಗೆದುಕೊಂಡು ಹೋಗುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.
धका मुक्की में गिर गए @rajnathsingh ये गलत बात है इतने सीनियर लीडर के साथ कार्यकर्ता ऐसा करते है .. pic.twitter.com/O4aoGDb2nU
— Sandeep Mishra (@sandeepmishraLK) February 17, 2022
ಘಟನೆಯಿಂದ ಚೇತರಿಸಿಕೊಂಡ ಬಳಿಕ ಸಚಿವ ರಾಜನಾಥ್ ಚುನಾವಣಾ ಪ್ರಚಾರ ಮುಂದುವರಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ವಿರುದ್ಧ ಸಿಂಗ್ ವಾಗ್ದಾಳಿ ನಡೆಸಿದರು. ಸೇನೆ ಇಲ್ಲದ ಕಮಾಂಡರ್ ಇದ್ದಂತೆ ಎಂದು ಸಿಂಗ್ ವ್ಯಂಗ್ಯವಾಡಿದ್ರು.
‘ನಾನು ಪಂಜಾಬ್ ಮುಖ್ಯಮಂತ್ರಿಯನ್ನು ನೋಡುತ್ತಿದ್ದೇನೆ. ಬಿನಾ ಸೈನಿಕೋ ವಾಲೇ ಸೇನಾಪತಿ ಹೈಂ (ಸೈನ್ಯವಿಲ್ಲದ ಕಮಾಂಡರ್‌ನಂತೆ ಇದ್ದ) ಅವರು ಸೇನಾಪತಿ (ಮುಖ್ಯಸ್ಥ) ಆದರು. ಆದರೆ ಅವನ ಬಳಿ ಸೈನ್ಯವಿಲ್ಲ… ಆದರೂ ಕಾಂಗ್ರೆಸ್ ತನ್ನಷ್ಟಕ್ಕೆ ತಾನೇ ಹೋರಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಒಂದೇ ಕ್ರೀಸ್‌ಗಾಗಿ ಸೆಣಸಾಡುತ್ತಿದ್ದಾರೆ. ಎಂದು ಕಾಲೆಳೆದಾಡುತ್ತಿದ್ದಾರೆ.