LifestyleNational

ತಿರುಪತಿಯಲ್ಲಿ ಲಡ್ಡು ಕೊಡ್ತಾರೆ; ಅಯೋಧ್ಯೆಯಲ್ಲಿ ಕೊಡೋ ಪ್ರಸಾದ ಯಾವುದು ಗೊತ್ತಾ..?

ಅಯೋಧ್ಯೆ; ಪ್ರಖ್ಯಾತ ದೇವಸ್ಥಾನಗಳಲ್ಲಿ ಕೊಡುವ ಪ್ರಸಾದ ವಿಶೇವಾಗಿರುತ್ತೆ.. ತಿರುಪತಿಯಲ್ಲಿ ಲಡ್ಡು, ಅಣ್ಣವರಂನಲ್ಲಿ ಗೋಧಿ ಹಿಟ್ಟಿನಿಂದ ಮಾಡಿದ ಪ್ರಸಾದ, ವಿಜಯವಾಡ ಕನಕದುರ್ಗಮ್ಮ ದೇವಸ್ಥಾನದಲ್ಲಿ ಪುಳಿಯೋಗರೆ, ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಕೊಡುವ ಆವರಣ ಪಾಯಸಂ, ಶಿರಡಿಯಲ್ಲಿ ನೀಡುವ ದೂದ್ ಪೇಡ, ಮಂತ್ರಾಲಯದಲ್ಲಿ ನೀಡುವ ಪರಿಮಳ ಪ್ರಸಾದ.. ಹೀಗೆ ಹಲವು ದೇಸ್ಥಾನಗಳಲ್ಲಿ ನೀಡುವ ಪ್ರಸಾದಗಳು ತಮ್ಮದೇ ಆದ ವಿಶೇಷತೆಯನ್ನು ಹೊಂದಿವೆ. ಇನ್ನು ಅಯೋಧ್ಯೆಯಲ್ಲಿ ಇದೇ ಜನವರಿ 22ರಂದು ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಹಾಗಾದರೆ ರಾಮಮಂದಿರದಲ್ಲಿ ಕೊಡುವ ಪ್ರಸಾದ ಏನು ಅನ್ನೋದರ ಬಗ್ಗೆ ಭಕ್ತರಿಗೆ ಕುತೂಹಲ ಇದ್ದೇ ಇರುತ್ತದೆ. ಆ ಕುತೂಹಲ ತಣಿಸುವ ಸ್ಟೋರಿ ಇದು.

ಜನವರಿ 22 ರಂದು ಪ್ರಾಣಪ್ರತಿಷ್ಠೆಯ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ರಾಮ ಮಂದಿರಕ್ಕೆ ಬರುವ ಭಕ್ತರಿಗೆ ನೀಡುವ ಪ್ರಸಾದದ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಏಲಕ್ಕಿಯನ್ನು  ಪ್ರಸಾದವಾಗಿ ನೀಡಲು ಟ್ರಸ್ಟ್ ನಿರ್ಧರಿಸಿದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ಸಕ್ಕರೆ ಮತ್ತು ಏಲಕ್ಕಿಯಿಂದ ಮಾಡಿದ ಇಲಚಿದಾನವನ್ನು ಈಗಾಗಲೇ ದೇಶದ ಕೆಲವು ದೇವಾಲಯಗಳಲ್ಲಿ ಭಕ್ತರಿಗೆ ನೀಡಲಾಗುತ್ತಿದೆ. ಇಲ್ಲೂ ಕೂಡಾ ಏಲಕ್ಕಿಯಿಂದ ವಿಶೇಷವಾಗಿ ತಯಾರಿಸಿದ ಪ್ರಸಾದ ನೀಡಲು ನಿರ್ಧರಿಸಲಾಗಿದೆ.

ಇದರೊಂದಿಗೆ, ರಾಮಜನ್ಮಭೂಮಿ ಟ್ರಸ್ಟ್ ಈ ಪ್ರಸಾದವನ್ನು ತಯಾರಿಸುವ ಜವಾಬ್ದಾರಿಯನ್ನು ರಾಮ್ ವಿಲಾಸ್ ಮತ್ತು ಸನ್ಸ್ ಅಂಗಡಿಗೆ ವಹಿಸಿದೆ. ಪ್ರಸಾದ ತಯಾರಿಕಾ ಕಂಪನಿ ಮಾಲೀಕ ಬೋಲ್ ಚಂದ್ರಗುಪ್ತ ಈ ಬಗ್ಗೆ ಮಾಹಿತಿ ನೀಡಿದ್ದಾರೆ.  ‘ಇಲಾಚಿದಾನವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ.. ಪೂರ್ವಾಂಚಲ ಪ್ರದೇಶದಿಂದಲೂ ಅವರು ಅದನ್ನು ನಮ್ಮಿಂದ ಪ್ರಸಾದವಾಗಿ ಖರೀದಿಸುತ್ತಾರೆ’. ಪ್ರಾಣ ಪ್ರತಿಷ್ಠೆ ನಡೆಯುವ ಜನವರಿ 22ಕ್ಕೆ ಮೊದಲು 5 ಲಕ್ಷ ಇಲಚಿದಾನ ಪ್ರಸಾದ ಪೊಟ್ಟಣಗಳನ್ನು ದೇವಸ್ಥಾನದ ಟ್ರಸ್ಟ್‌ಗೆ ನೀಡಲು ಶ್ರಮಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಏಲಕ್ಕಿ ಬೀಜಗಳು ಸಹ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಎಂದು ಗುಪ್ತಾ ಹೇಳಿದರು. ಇದರಲ್ಲಿ ಪೊಟಾಶಿಯಂ, ಮೆಗ್ನೀಷಿಯಂ ಸೇರಿದಂತೆ ಹಲವು ಔಷಧೀಯ ಗುಣಗಳಿವೆ ಎಂದು ವಿವರಿಸಲಾಗಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ತುಂಬಾ ಉಪಯುಕ್ತ ಎಂದು ಹೇಳಲಾಗುತ್ತದೆ.

Share Post