National

ಮುಂಬೈನಲ್ಲಿ ಭಾರಿ ಅಗ್ನಿ ದುರಂತ; 3 ಪೀಠೋಪಕರಣ ಗೋಡೌನ್‌ ಭಸ್ಮ

ಮುಂಬೈ: ಮುಂಬೈನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಥಾಣೆಯ ಭಿವಂಡಿ ಪ್ರದೇಶದ  ಸುಮರಸ್‌ ಚಾಮುಂಡ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪೀಠೋಪಕರಣ ಗೋಡೌನ್‌ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ದುರಂತದಲ್ಲಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.

ಬೆಂಕಿ ಮೂರು ಗೋಡೌನ್‌ಗಳಿಗೆ ವ್ಯಾಪಿಸಿತ್ತು. ಮೂರೂ ಗೋಡೌನ್‌ಗಳಲ್ಲಿದ್ದ ಪೀಠೋಪಕರಣಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.  ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿ ನಂದಿಸಿವೆ. ನಾಲ್ಕು ಗಂಟೆಗೂ ಹೆಚ್ಚು ಕಾಲ ಈ ಕಾರ್ಯಾಚರಣೆ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ್ದರ ಬಗ್ಗೆ ವರದಿಯಾಗಿಲ್ಲ.

 

 

Share Post