ಪ್ರತಿದಿನ ಮೋದಿ ಕಾರ್ಯವೈಖರಿ ಲಿಸ್ಟ್: ಟ್ವೀಟ್ ಮಾಡಿ ಪ್ರಧಾನಿ ಕಾಲೆಳೆದ ರಾಹುಲ್ ಗಾಂಧಿ
ದೆಹಲಿ: ಪಂಚ ರಾಜ್ಯಗಳ ಚುನವಾಣೆ ಬಳಿಕ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ಮತ್ತೆ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಕಾಂಗ್ರೆಸ್ ಹೈಕಮಾಂಡ್ ಶತ ಪ್ರಯತ್ನ ಮಾಡ್ತಿದೆ. ಈ ನಿಟ್ಟಿನಲ್ಲಿ ಸಭೆಗಳನ್ನು ಕೂಡ ಮಾಡ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ ಈಗಾಗಲೇ ಬೆಲೆ ಏರಿಕೆ ಅಸ್ತ್ರ ಪ್ರಯೋಗ ಮಾಡಲು ನಿರ್ಧಾರ ಮಾಡಿದೆ. ಪಕ್ಷ ಸಂಘಟನೆಗಾಗಿ ನಾನಾ ಪ್ರಯತ್ನಗಳನ್ನು ಹಸ್ತ ಪಕ್ಷ ಕೈಗೊಂಡಿದೆ. ಈ ನಿಟ್ಟಿನಲ್ಲಿ ಮೋದಿ ಕಾಲೆಳೆಯಲು ಅವರ ಪ್ರತಿದಿನ ಕಾರ್ಯವೈಖರಿ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿಯವರು ದೈನಂದಿನ ಕೆಲಸಗಳ ಬಗ್ಗೆ ಮಾಡಿರುವ ಪಟ್ಟಿ ಹೀಗಿದೆ:
೧. ಪೆಟ್ರೋಲ್, ಡಿಸೇಲ್ ಗ್ಯಾಸ್ ದರ ಎಷ್ಟು ಹೆಚ್ಚಳ ಮಾಡಬೇಕು
೨. ಜನರ ಖರ್ಚಿನ ಚರ್ಚೆ ನಿಲ್ಲಿಸುವುದು ಹೇಗೆ..?
೩. ಯುವಕರಿಗೆ ಉದ್ಯೋಗದ ಖಾಲಿ ಕನಸು ತೋರಿಸುವುದು ಯಾವ ರೀತಿ..?
೪. ಇಂದು ಯಾವ ಸರ್ಕಾರಿ ಕಂಪನಿ ಮಾರಾಟ ಮಾಡುವುದು..?
೫. ರೈತರನ್ನು ಹೆಚ್ಚು ಅಸಹಾಯಕರನ್ನಾಗಿ ಮಾಡುವುದು ಯಾವ ರೀತಿ..?
ಹೀಗೆ ಐದು ವಿಚಾರಗಳ ಪಟ್ಟಿ ಮಾಡಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
प्रधानमंत्री की Daily To-Do List
1. पेट्रोल-डीज़ल-गैस का रेट कितना बढ़ाऊँ
2. लोगों की ‘खर्चे पे चर्चा’ कैसे रुकवाऊँ
3. युवा को रोज़गार के खोखले सपने कैसे दिखाऊं
4. आज किस सरकारी कंपनी को बेचूँ
5. किसानों को और लाचार कैसे करूँ#RozSubahKiBaat— Rahul Gandhi (@RahulGandhi) March 30, 2022