ಹಿಜಾಬ್‌ಗೆ ಅಡ್ಡಿಪಡಿಸುವುದು ತಪ್ಪು; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ನವದೆಹಲಿ: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಹಿಜಾಬ್‌ಗೆ ಅಡ್ಡಿಪಡಿಸಿದರೆ ಆ ಹೆಣ್ಣಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದಂತೆ ಆಗುತ್ತದೆ. ಇದ್ರಿಂದ ಭಾರತಾಂಬೆಯ ಮಕ್ಕಳ ಶಿಕ್ಷಣ ಕಿತ್ತುಕೊಂಡಂತೆ ಆಗುತ್ತದೆ ಎಂದು ಹೇಳಿದ್ದಾರೆ.
ವಿದ್ಯೆ ನೀಡುವ ಸರಸ್ವತಿಯೇ ಯಾರಿಗೂ ಬೇಧಭಾವ ಮಾಡುತ್ತಿಲ್ಲ. ಎಲ್ಲರಿಗೂ ಸಮನಾಗಿ ಶಿಕ್ಷಣ ನೀಡುತ್ತಿದ್ದಾರೆ. ಹೀಗಾಗಿ, ನಾವು ಬೇಧ ಭಾವ ತೋರಿಸುವುದು ಸರಿಯಲ್ಲ. ಹಿಜಾಬ್ ಧರಿಸಿ ಬರುವ ಹೆಣ್ಣು ಮಕ್ಕಳಿಗೆ ಅಡ್ಡಿಪಡಿಸುವುದು ಸರಿ ಎನಿಸುವುದಿಲ್ಲ ರಾಹುಲ್ ಗಾಂಧಿ ಹೇಳಿದ್ದಾರೆ.