ಜಮ್ಮು ಹಾಗೂ ನೋಯ್ಡಾದಲ್ಲಿ ಭೂಕಂಪನ
ಶ್ರೀನಗರ: ಜಮ್ಮು-ಕಾಶ್ಮೀರ ಹಾಗೂ ನೋಯ್ಡಾದಲ್ಲಿ ಇಂದು ಮುಂಜಾನೆ ಭೂಮಿ ನಡುಗಿದ ಅನುಭವವಾಗಿದೆ. ಅಫ್ಗಾನಿಸ್ತಾನ ಹಾಗೂ ಪಾಕಿಸ್ತಾನದ ಕೆಲವು ಭಾಗಗಳಲ್ಲೂ ಭೂಕಂಪನವಾಗಿದೆ ಎಂದು ತಿಳಿದುಬಂದಿದೆ. ಆ ಭಾಗದ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.
ರಿಕ್ಟರ್ ಮಾಪಕದಲ್ಲಿ 5.6ತೀವ್ರತೆ ದಾಖಲಾಗಿದೆ. ಇದರ ಕೇಂದ್ರಬಿಂದು ಅಫ್ಗಾನಿಸ್ತಾನದಲ್ಲಿ ದಾಖಲಾಗಿದೆ. ಅಫ್ಗಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಭೂಮಿ ಹೆಚ್ಚು ನಡುಗಿದೆ. ಆದ್ರೆ ಭಾರತದಲ್ಲಿ ಭೂಮಿ ಸಣ್ಣದಾಗಿ ಕಂಪಿಸಿದೆ. ಮನೆಗಳಲ್ಲಿನ ಪಾತ್ರೆಗಳು ಉರುಳಿಬಿದ್ದಿವೆ. ಇದ್ರಿಂದ ಇಲ್ಲಿನ ಜನ ಆತಂಕಕ್ಕೆ ಒಳಗಾಗಿದ್ದಾರೆ.