CrimeNational

ಅಪಘಾತಕ್ಕೆ ಕಾರಣಕರ್ತರು ಯಾರೆಂಬುದು ಗೊತ್ತಾಗಿದೆ; ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಬಾಲಾಸೋರ್;‌ ಒಡಿಶಾದಲ್ಲಿ ನಡೆದ ರೈಲು ದುರಂತಕ್ಕೆ ಕಾರಣ ಗೊತ್ತಾಗಿದೆ, ಜೊತೆಗೆ ಇದಕ್ಕೆ ಕಾರಣಕರ್ತರು ಯಾರೆಂಬುದು ಗೊತ್ತಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಘಟನೆ ಕಾರಣ ಯಾರು ಎಂಬುದನ್ನು ಶೀಘ್ರವೇ ಮಾಹಿತಿ ಕೊಡುತ್ತೇವೆ ಎಂದು ಹೇಳಿದ್ದಾರೆ.

ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ನಲ್ಲಿ ಬದಲಾವಣೆಯಿಂದ ಈ ದುರಂತ ಸಂಭವಿಸಿದೆ. ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ಘಟನೆಯ ಬಗ್ಗೆ ತನಿಖೆ ನಡೆಸಿದರು. ಅವರು ಈ ಘಟನೆಗೆ ಕಾರಣವಾದವರನ್ನು ಹಾಗೂ ಹಾಗೂ ಈ ಅವಘಡಕ್ಕೆ ಕಾರಣವಾದವರನ್ನು ಗುರುತಿಸಿದ್ದಾರೆ. ಶೀಘ್ರದಲ್ಲೇ ಈ ಭಾಗದಲ್ಲಿ ಮಾಹಿತಿ ನೀಡುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಇದೀಗ ಅಪಘಾತದಿಂದ ಟ್ರ್ಯಾಕ್‌ ಹಾಳಾಗಿದ್ದು, ಅದರ ದುರಸ್ತಿ ಕಾರ್ಯ ನಡೆಸಿದ್ದಾರೆ. ಜೂನ್​ 7ರ ಹೊತ್ತಿಗೆ ಕಾರ್ಯಗಳು ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.

 

Share Post