LifestyleNational

ತಾಯಿಗೆ ನಾಯಿ ಮರಿ ಗಿಫ್ಟ್‌ ಕೊಟ್ಟ ರಾಹುಲ್‌ ಗಾಂಧಿ

ನವದೆಹಲಿ; ನಿನ್ನೆ ವಿಶ್ವ ಪ್ರಾಣಿಗಳ ದಿನಾಚರಣೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ತಮ್ಮ ತಾಯಿ ಸೋನಿಯಾಗಾಂಧಿಗೆ ಒಂದು ಮುದ್ದಾದ ನಾಯಿ ಮರಿಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ರಾಹುಲ್‌ ಗಾಂಧಿಯವರು ಗೋವಾ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಉತ್ತರ ಗೋವಾದ ಮಾಪುಸಾದಲ್ಲಿ ನೂರಿ ಹೆಸರಿನ ನಾಯಿಮರಿಯನ್ನು ದತ್ತು ಪಡೆದುಕೊಂಡಿದ್ದರು. ಆ ನಾಯಿ ಮರಿಯನ್ನು ರಾಹುಲ್‌ ನಿನ್ನೆ ತನ್ನ ತಾಯಿ ಸೋನಿಯಾಗಾಂಧಿಯವರಿಗೆ ಗಿಫ್ಟ್‌ ನೀಡಿದ್ದಾರೆ.

ಮುದ್ದಾದ ಪ್ರಾಣಿಗಳಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ ಎಂದು ರಾಹುಲ್‌ ಬರೆದುಕೊಂಡಿದ್ದಾರೆ.

Share Post