BengaluruCrime

ಪತ್ನಿಯನ್ನು ಕೊಂದ ನೇಣು ಹಾಕಿದ ಪಾಪಿ ಪತಿ!

ಬೆಂಗಳೂರು; ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಅಂತಾರಾದರೂ, ಮನೆಯಲ್ಲಿ ಹಿರಿಯರು ಇಲ್ಲದ ಕುಟುಂಬಗಳಲ್ಲಿ ಕಲಹಗಳು ಜಾಸ್ತಿಯಾಗುತ್ತಿವೆ. ನಗರ ಪ್ರದೇಶಗಳಲ್ಲಿ ಗಂಡ-ಹೆಂಡಿರ ಜಗಳಗಳು, ಕೊಲೆಗಳು ಜಾಸ್ತಿಯಾಗುತ್ತಿವೆ. ಕಳೆದ ರಾತ್ರಿ ಕೂಡಾ ಬೆಂಗಳೂರಿನಲ್ಲಿ ಇಂತಹದ್ದೇ ಒಂದು ಕೃತ್ಯ ನಡೆದಿದೆ.

ಯಲಹಂಕ ಉಪನಗರದ ಮೂರನೇ ಹಂತದಲ್ಲಿ ಕಳೆದ ರಾತ್ರಿ ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ, ಫ್ಯಾನಿಗೆ ನೇಣು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಕೊಲೆ ಮಾಡಿ ನೇಣು ಹಾಕಿ, ಆತ್ಮಹತ್ಯೆ ಎಂದು ಆರೋಪಿ ಬಿಂಬಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ರೇಖಾ ಎಂಬಾಕೆಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾಳೆ. ಗಂಡ ಸಂತೋಷನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಯಲಹಂಕ ನ್ಯೂ ಟೌನ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಸಂತೋಷ್‌ನನ್ನು ವಿಚಾರಣೆಗೊಳಪಡಿಸಿದ್ದಾರೆ.

 

Share Post