NationalPolitics

ಭಾರತ್‌ ಜೋಡೋ ಯಾತ್ರೆಗೆ ಬಾಂಬ್‌ ಬೆದರಿಕೆ

ಭೋಪಾಲ್; ಭಾರತ್‌ ಜೋಡೋ ಯಾತ್ರೆ ಮಧ್ಯಪ್ರದೇಶ ಪ್ರವೇಶಕ್ಕೂ ಮುನ್ನ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಗೆ ಜೀವ ಬೆದರಿಕೆ ಹಾಕಲಾಗಿದೆ. ರಾಹುಲ್‌ ಗಾಂಧಿ ಇಂದೋರ್‌ಗೆ ಕಾಲಿಟ್ಟ ತಕ್ಷಣ ಬಾಂಬ್ ಸ್ಫೋಟಿಸಿ ಕೊಲ್ಲುವುದಾಗಿ ಬೆದರಿಕೆ ಒಡ್ಡಲಾಗಿದೆ.

ಇಂದೋರ್‌ನ ಸ್ವೀಟ್ಸ್‌ ಮಳಿಗೆಯ ಹೊರಗೆ ಸಿಕ್ಕಿದ ಪತ್ರದಲ್ಲಿ ರಾಹುಲ್ ಗಾಂಧಿಯನ್ನು ಕೊಲ್ಲುವುದಾಗಿ ತಿಳಿಸಲಾಗಿದೆ. ಹೀಗಾಗಿ ಪೊಲಿಸರು ಅಲ್ಲಿನ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಆರೋಪಿ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಬಹುದು ಎನ್ನಲಾಗುತ್ತಿದೆ.

Share Post