ಪಂಜಾಬ್ – ನೈಟ್ ಕರ್ಫ್ಯೂ ಮತ್ತು ಶಾಲಾ ಕಾಲೇಜ್ ಬಂದ್
ಚಂಡೀಗಢ : ಮೂರನೆ ಅಲೆ ವ್ಯಾಪಿಸುತ್ತಿರುವ ಹಿನೆಲೆಯಲ್ಲಿ ರಾಜ್ಯಗಳು ತೀವ್ರ ಕ್ರಮಗಳನ್ನು ಜರುಗಿಸುತ್ತಿದ್ದಾರೆ. ಈಗ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಪರಿಶೀಲನಾ ಸಭೆಯಲ್ಲಿ ಬಿಗಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಕೋವಿಡ್ ಹೆಚ್ಚಾಗುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಪಂಜಾಬ್ ಸರ್ಕಾರ ಶಾಲಾ ಕಾಲೇಜುಗಳನ್ನು ಬಂದ್ ಮಾಡಿದೆ. ಹಾಗೆಯೇ ಸಾರ್ವಜನಿಕ ಓಡಾಟವನ್ನು ನಿಯಂತ್ರಿಸುವ ನಿಟ್ಟಿನಿಂದ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಡಿಸೆಂಬರ್ 28ರಂದು 51 ಕೊರೊನಾ ಕೇಸ್‌ಗಳು ದಾಖಲಾಗಿದ್ದವು. ನಿನ್ನೆ ಒಮ್ಮೆಲೆ 419 ಪ್ರಕರಣಗಳು ದಾಖಲಾಗಿದೆ.
ಹೊಸ ಮಾರ್ಗಸೂಚಿಯ ಪ್ರಕಾರ ಎಲ್ಲಾ ವಿಶ್ವವಿದ್ಯಾಲಯಗಳು ಆಫ್‌ಲೈನ್ ಶಿಕ್ಷಣವನ್ನು ನಿಲ್ಲಿಸಬೇಕು. ಆನ್‌ಲೈನ್ ಶಿಕ್ಷಣ ಮಾತ್ರ ಚಾಲ್ತಿಯಲ್ಲಿರಬಹುದು. ಆದರೆ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳಿಗೆ ಎಂದಿನಂತೆ ಕಾರ್ಯನಿರ್ವಹಿಸಬಹುದು ಎಂದು ಹೇಳಲಾಗಿದೆ.
ಪ್ರತಿ ದಿನ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ನೈಟ್ ಕರ್ಫ್ಯೂ ಚಾಲ್ತಿಯಲ್ಲಿರುತ್ತದೆ. ಬಾರ್‌ಗಳು, ಸಿನಿಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್, ಮಾಲ್, ರೆಸ್ಟೋರೆಂಟ್, ಮ್ಯೂಸಿಯಂ, ಮತ್ತು ಮೃಗಾಲಯಗಳು ಶೇ.5ಂ ರಷ್ಟು ಕಾರ್ಯನಿರ್ವಹಿಸಬಹುದು. ಸಿಬ್ಬಂದಿ ಸದಸ್ಯರದ್ದು ಎರಡು ಡೋಸ್ ಲಸಿಕೆ ಆಗಿದ್ದರೆ ಮಾತ್ರ ಅವರನ್ನು ಒಳಗೆ ಬಿಡಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಮಾರ್ಗ ಸೂಚಿ ಜನವರಿ 15ರವರೆಗೆ ಚಾಲ್ತಿಯಲ್ಲಿರಲಿದೆ. ತದನಂತರ ಇದನ್ನು ಮರು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.