ಅಬ್ಬಬ್ಬಾ..ಇದು ಅಂತಿಂಥ ಏಡಿಯಲ್ಲ, ಇದರ ಸಾಮರ್ಥ್ಯ ಕೇಳಿದ್ರೆ ಬೆರಗಾಗ್ತೀರ..!
ಆಸ್ಟ್ರೇಲಿಯಾ: ಕೆಲವೊಮ್ಮೆ ಯಾರ ಶಕ್ತಿಯನ್ನೂ ಹಂಗಿಸಬಾರದು. ದಪ್ಪಗಿರುವವರು, ಹನವಂತರು, ಬಲಶಾಲಿಗಳು ಮಾತ್ರ ಕೆಲಸ ಮಾಡ್ತಾರೆ ಅಂದುಕೊಂಡ್ರೆ ಅದು ತಪ್ಪಾಗತ್ತೆ. ಎಲ್ಲರಿಗೂ ಆಮೆ ಮತ್ತು ಮೊಲದ ಕಥೆ ಗೊತ್ತೇ ಇದೆ. ಯಾರನ್ನೂ ತುಚ್ಚವಾಗಿ ಕಾಣಬಾರದು ಎಲ್ಲರಿಗೂ ಅವರದ್ದೇ ಆದ ಶಕ್ತಿ-ಸಾಮರ್ಥ್ಯಗಳಿರುತ್ತವೆ ಎಂಬುದನ್ನು ಈ ಸುದ್ದಿ ಒದಿದ್ರೆ ತಿಳಿಯುತ್ತದೆ. ಸಾಮಾನ್ಯ ಏಡಿ ಅಲ್ವಾ ಅಂತ ನೆಗ್ಲೆಕ್ಟ್ ಮಾಡಿದ್ದಕ್ಕೆ ಗಾಲ್ಪ್ ಬ್ಯಾಟನ್ನು ಈ ಏಡಿ ಮುರಿದು ಹಾಕಿದೆ. ಗಾಲ್ಪ್ ಕ್ಲಬ್‌ನಲ್ಲಿ ದೊರೆತ ತೆಂಗಿನ ಏಡಿಯನ್ನು ಅಲ್ಲಿನ ಆಟಗಾರರು ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದಾರೆ. ಸ್ವಲ್ಪ ಸಮಯದ ಬಳಿಕ ನೋಡಿದ್ರೆ ಏಡಿ ಬ್ಯಾಟ್ ಅನ್ನು ಬಿಗಿಯಾಗಿ ತನ್ನ ಕಾಲುಗಳಿಂದ ಹಿಡಿದುಕೊಂಡಿದೆ. ಆಶ್ಚರ್ಯಚಕಿತರಾಗಿ ಆಟಗಾರರು ವಿಡಿಯೋ ಮಾಡುತ್ತಾ ಕೂಳಿತು ಅದರ ಚಲನ ವಲನವನ್ನು ಗಮನಿಸಿದ್ದಾರೆ. ತನ್ನ ಕಾಲು, ಕೊಂಡಿಗಳ ಸಹಾಯದಿಂದ ಗಾಲ್ಫ್ ಬ್ಯಾಟನ್ನು ತುಂಡರಿಸಿದೆ. ಈ ವಿಡಿಯೋವನ್ನು ಆಟಗಾರರ ಪತ್ನಿ ಕೆರ್ರಿ ಬುಹ್ನರ್ ಎಂಬುವವರು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ತೆಂಗಿನ ಏಡಿ ಪ್ರಪಂಚದ ಅತಿ ದೊಡ್ಡ ಏಡಿಯಾಗಿದ್ದು, ತೆಂಗಿನ ಮರ ಇದರ ಆವಸಸ್ಥಾನವಾಗಿರುತ್ತದೆ. ಪ್ರಬಲವಾದ ಉಗುರುಗಳಿಂದ ಮರವನ್ನು ಹತ್ತಿ ತೆಂಗಿನ ಕಾಯಿ ತಿಂದು ಹಸಿವು ನೀಗಿಸಿಕೊಳ್ಳುತ್ತದೆ. ಇವುಗಳ ಸಂತಾನೋತ್ಪತ್ತಿ ಕೇಳಿದ್ರೆ ದಂಗಾಗೋದು ಗ್ಯಾರೆಂಟಿ, ಇಪ್ಪತ್ತು ಲಕ್ಷ ಮೊಟ್ಟಗಳನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ಮರಿಗಳಾದ ಮೇಲೆ ಹೊರಬಿಡುತ್ತವಂತೆ. ಇವು ೩-೪ ರಿಂದ ಹಿಡಿದು ೧೦-೧೨ ಅಡಿ ಅಗಲ ದಪ್ಪ ಇರುತ್ತವೆ. ೫೦ ವರ್ಷಗಳ ಕಾಲ ಇವುಗಳ ಜೀವಿತಾವಧಿ ಇರುತ್ತದೆ.