National

ಗುರುಪ್ರೀತ್‌ ಕೌರ್‌ ಜೊತೆ ಸಪ್ತಪದಿ ತುಳಿದ ಪಂಜಾಬ್‌ ಸಿಎಂ

ಚಂಡೀಗಢ;  ಪಂಜಾಬ್ ಮುಖ್ಯಮಂತ್ರಿ ಭಗವಂತ್​ ಮಾನ್ ಅವರು  ವೈದ್ಯೆ  ಡಾ.ಗುರುಪ್ರೀತ್‌ ಕೌರ್‌ ಅವರನ್ನು ಮದುವೆಯಾಗಿದ್ದಾರೆ.  ಚಂಡೀಗಢದ ಅವರ ನಿವಾಸದಲ್ಲಿ ಸರಳವಾಗಿ ಈ ವಿವಾಹ ನೆರವೇರಿತು. ಈ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಪಾಲ್ಗೊಂಡು, ನೂತನ ವಧು ವರರಿಗೆ ಆಶೀರ್ವದಿಸಿದರು.

    ಭಗವಂತ್ ಮಾನ್​ ಅವರು ಇಂದ್ರಪ್ರೀತ್‌ ಕೌರ್‌ ಎಂಬುವವರನ್ನು ಮದುವೆಯಾಗಿದ್ದರು. ಆದ್ರೆ ದಾಂಪತ್ಯದಲ್ಲಿ ವಿರಸ ಉಂಟಾಗಿದ್ದರಿಂದಾಗಿ ಆರು ವರ್ಷದ ಹಿಂದೆ ಇಂದ್ರಪ್ರೀತ್‌ಗೆ ವಿಚ್ಛೇದನ ನೀಡಿದ್ದರು.  ಸದ್ಯ ಇಂದ್ರಪ್ರೀತ್‌ ಅವರು ಅಮೆರಿಕಾದಲ್ಲಿ ಎರಡು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಾರೆ. ಭಗವಂತ್ ಮಾನ್​ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು.  ಡಾ. ಗುರುಪ್ರೀತ್ ಕೌರ್​ ಎಂಬಿಬಿಎಎಸ್​​ ಪದವೀಧರೆ ಆಗಿದ್ದು, ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಗವಂತ್‌ ಮಾನ್‌ ಅವರ ತಾಯಿಯವರೇ ಗುರುಪ್ರೀತ್‌ ಕೌರ್‌ ಅವರನ್ನು ಆಯ್ಕೆ ಮಾಡಿದರೆಂದು ಗೊತ್ತಾಗಿದೆ. ಸರಳ ಸಮಾರಂಭದಲ್ಲಿ ಎರಡೂ ಕಡೆಯ ಸಂಬಂಧಿಕರಷ್ಟೇ ಹಾಜರಿದ್ದರು.

Share Post