International

ಭಾರತದಲ್ಲಿ ಹೊಸ ಒಮಿಕ್ರಾನ್‌ ರೂಪಾಂತರ ತಳಿ; ವಿಶ್ವ ಆರೋಗ್ಯ ಸಂಸ್ಥೆ

ವಾಷಿಂಗ್ಟನ್‌; ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೇ ಆತಂಕದ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಒಮಿಕ್ರಾನ್‌ನ ಹೊಸ ಉಪತಳಿ ಬಿಎ.2.75 ಭಾರತದಲ್ಲಿ ಪತ್ತೆಯಾಗಿದೆ. ಇದರ ಮೇಲೆ ನಿಗಾ ವಹಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೋಸ್‌ ಅಡಾನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ.

ಬಿಎ.2.75 ಕುರಿತು ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಬಿಎ.2.75 ಎಂದು ಕರೆಯಲಾಗುವ ತಳಿಯೊಂದು ಹೊರಹೊಮ್ಮಿದೆ. ಅದು ಭಾರತದಲ್ಲಿ ಮೊದಲು ಪತ್ತೆಯಾಗಿದ್ದು, ನಂತರ 10 ದೇಶಗಳಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

Share Post