National

ಪಂಜಾಬ್‌ನಲ್ಲಿ ಎಎಪಿ ಅಧಿಕಾರ ಪಕ್ಕಾ; 83 ಕ್ಷೇತ್ರಗಳಲ್ಲಿ ಮುನ್ನಡೆ

ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಅಧಿಕಾರ ಹಿಡಿಯುವುದು ಪಕ್ಕಾ ಆಗಿದೆ. ಸದ್ಯದ ಮಾಹಿತಿ ಪ್ರಕಾರ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳು 83 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಕಾಂಗ್ರೆಸ್‌ 23 ಸ್ಥಾನಗಳು, ಶಿರೋಮಣಿ ಅಕಾಲಿ ದಳ 08 ಹಾಗೂ ಬಿಜೆಪಿ ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.

ಪಂಜಾಬ್‌ನಲ್ಲಿ ಒಟ್ಟು 117 ಸ್ಥಾನಗಳಿದ್ದು, ಅಧಿಕಾರ ಹಿಡಿಯಲು 59 ಸ್ಥಾನಗಳು ಬೇಕಾಗಿವೆ. ಆಮ್‌ ಆದ್ಮಿ ಪಾರ್ಟಿ ಈಗಾಗಲೇ ಮ್ಯಾಜಿಕ್‌ ನಂಬರ್‌ ದಾಟಿ ಸಾಕಷ್ಟು ಮುಂದೆ ಹೋಗಿದೆ. ಹೀಗಾಗಿ ಆಮ್‌ ಆದ್ಮಿ ಪಾರ್ಟಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಇಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿದೆ. ಹಾಲಿ ಸಿಎಂ ಚರಣ್‌ ಜೀತ್‌ ಸಿಂಗ್‌ ಅವರು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಸಾಧಿಸಿದ್ದಾರೆ.

ಪಂಜಾಬ್‌
117 ಸ್ಥಾನ \ ಮ್ಯಾಜಿಕ್‌ ನಂಬರ್‌ 59

ಕಾಂಗ್ರೆಸ್‌ – 23
ಎಎಪಿ – 83
ಶಿರೋಮಣಿ ಅಕಾಲಿ ದಳ – 8
ಬಿಜೆಪಿ – 03

Share Post