National

ಸಂಸತ್‌ನ 700ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್

ನವದೆಹಲಿ : ಮೂರನೇ ಅಲೆ ಸಮುದಾಯಕ್ಕೆ ಈಗಾಗಲೇ ಹಬ್ಬಿದೆ. ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ ಅತಿ ಹೆಚ್ಚು ಪಾಸಿಟಿವ್‌ ಸೋಂಕುಗಳು ಕಾಣಿಸಿಕೊಳ್ಳುತ್ತಿವೆ. ಜನವರಿ ೯ ರಿಂದ ೧೨ರ ನಡುವೆ ಸಂಸತ್‌ನ 300ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್‌ ಬಂದಿದೆ ಎಂದು ಮೂಲಗಳು ವರದಿ ಮಾಡಿವೆ.

ಜನವರಿ ೯ಕ್ಕೂ ಮುನ್ನ 400 ಸಿಬ್ಬಂದಿಗೆ ಕೊರೊನಾ ತಗುಲಿತ್ತು. ಈಗ ಕೊರೊನಾಗೆ ತುತ್ತಾಗಿರುವ ಸಂಸತ್‌ ಸಿಬ್ಬಂದಿಯ ಸಂಖ್ಯೆ 718ಕ್ಕೆ ಏರಿಕೆ ಆಗಿದೆ.

ಸೋಂಕಿತ 718 ಸಿಬ್ಬಂದಿಯಲ್ಲಿ 204 ಮಂದಿ ರಾಜ್ಯಸಭಾ ಸಚಿವಾಲಯದವರಾಗಿದ್ದಾರೆ, ಉಳಿದವರು ಲೋಕಸಭೆಯ ಸಚಿವಾಲಯ ಮತ್ತು ಇತರ ಸಿಬ್ಬಂದಿಗಳಾಗಿದ್ದಾರೆ ಎಂದು ವರದಿ ಆಗಿದೆ.

 

Share Post