National

ಸಂಕ್ರಾಂತಿ ಶುಭಾಶಯ; ಕನ್ನಡಿಗರನ್ನೇ ಮರೆತ ಪ್ರಧಾನಿ ಮೋದಿ

ನವದೆಹಲಿ: ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತಿದೆ. ಹಬ್ಬಗಳಂದು ಪ್ರಧಾನಿ ಹಾಗೂ ಮುಖ್ಯಮಂತ್ರಿ ಶುಭ ಹಾರೈಸೋದು ಸಾಮಾನ್ಯ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ, ಸಂಕ್ರಾಂತಿ ಹಬ್ಬ ಆಚರಿಸುತ್ತಿರುವ ಎಲ್ಲಾ ರಾಜ್ಯಗಳ ಜನಕ್ಕೆ ಆಯಾ ಭಾಷೆಗಳಲ್ಲೇ ಶುಭ ಕೋರಿದ್ದಾರೆ. ಆದರೆ ಕನ್ನಡಿಗರನ್ನು ಮಾತ್ರ ಮರೆತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಖಾತೆಯಲ್ಲಿ ಐದು ರಾಜ್ಯಗಳ ಜನಕ್ಕೆ ಅವರ ಭಾಷೆಗಳಲ್ಲೇ ಶುಭ ಕೋರಿ ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. ಆದ್ರೆ ಕನ್ನಡದ ಜನರಿಗೆ ಮಾತ್ರ ಶುಭ ಕೋರಿಲ್ಲ.

Share Post