ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಖಟ್ಟರ್ ಮನವಿ
ಪಂಜಾಬ್: ಮೊನ್ನೆ ಪ್ರಧಾನಿ ಮೋದಿಯವರಿಗೆ ನಡೆದ ಭದ್ರತಾ ಲೋಪ ನಡೆದಿದ್ದರಿಂದ ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬೇಕೆಂದು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಮಾನವಿ ಮಾಡಿದ್ದಾರೆ. ಪ್ರಧಾನಿಯವರು ಬೆಂಗಾವಲು ವಾಹನ ಸಮೇತ ಮೇಲ್ಸೇತುವೆ ಮೇಲೆ ಇಪ್ಪತ್ತು ನಿಮಿಷ ಕಾಯುಚುದು ಅಂದ್ರೆ ಏನು ತಮಾಷೆನಾ? ಇದು ದೇಶದ ಪ್ರಧಾನಿಗೆ ಸಂದ ಗೌರವ ಇಲ್ಲ. ಪಂಜಾಬ್ ಸರ್ಕಾರ ಭದ್ರತೆ ನೀಡುವಲ್ಲಿ ವಿಫಲವಾಗಿದೆ. ಪ್ರಧಾನಿಗೆ ಈ ರೀತಿ ಆದ್ರೆ ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಕತೆಯೇನು ಕೂಡಲೇ ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕೆಂದು ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೆಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮನವಿ ಪತ್ರದಲ್ಲಿ ಏನಿದೆ..?ಪಂಜಾಬ್‌ನಲ್ಲಿ ಶಾಂತಿ, ಭದ್ರತೆಯನ್ನು ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಪ್ರಧಾನಿ ರ್ಯಾಲಿಗೆ ಅಡ್ಡಿಯುಂಟುಮಾಡಿದ್ದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಹಾಗಾಗಿ ಅಲ್ಲಿರುವ ಚರಣ್ ಸಿಂಗ್ ಚನ್ನಿ ನೇತೃತ್ವದ ಸರ್ಕಾರವನ್ನು ರದ್ದು ಮಾಡಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಉಲ್ಲೇಖಿಸಿದ್ದಾರೆ. ಕೆಲವೇ ತಿಂಗಳಲ್ಲಿ ನಡೆಯುವ ಪಂಜಾಬ್ ವಿಧಾನಸಭಾ ಚುನಾವಣೆವರೆಗೂ ರಾಷ್ಟ್ರಪತಿ ಆಡಳಿತ ಇರಬೇಕೆಂದು ಮನೋಹರ್ ಲಾಲ್ ಖಟ್ಟರ್ ಒತ್ತಾಯ ಮಾಡಿದ್ದಾರೆ. ಪಂಜಾಬ್ ಸರ್ಕಾರದ ವಿರುದ್ಧ ರಾಷ್ಟ್ರಪತಿ ಕಠಿಣ ನಿರ್ಣಯವನ್ನು ತೆಗೆದುಕೊಳ್ಳಬೇಕು. ಚುನಾವಣೆ ನಿಮಿತ್ತ ಮತ್ತೆ ಪ್ರಧಾನಿಯವರು ಪಂಜಾಬ್‌ಗೆ ತೆರಳುವ ಸಾಧ್ಯತೆಯಿದೆ. ಮತ್ತೊಮ್ಮೆ ಈ ರೀತಿ ಆಗಬಾರದೆ ಅಂದ್ರೆ ಈಗಲೇ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಪ್ರಪಂಚದಲ್ಲಿ ಭಾರತ ಅತಿ ದೊಡ್ಡ ಪ್ರಜಾಸತ್ತಾತ್ಮಕ ದೇಶ. ಹೀಗಿರುವಾಗ ಉನ್ನತ, ಗೌರವಾನ್ವಿತ ಸ್ಥಾನದಲ್ಲಿರುವ ಪ್ರಧಾನಿಯವರಿಗೆ ನಡೆದ ಘಟನೆ ಪರಿಣಾಮಕಾರಿಯಾದುದ್ದಾಗಿದೆ. ಇದರ ಬಗ್ಗೆ ಮಾತನಾಡಿದ್ರೆ ನಮಗೇ ಗೊತ್ತೇ ಇಲ್ಲ ಅಂತ ಸಿಎಂ ಉಡಾಫೆ ಸಮಜಾಯಿಷಿ ನೀಡ್ತಾರೆ. ಅಲ್ಲಿನ ಪೊಲೀಸ್ ಅಧಿಕಾರಿಗಳೂ ಸಹ ಸರಿಯಾದ ಉತ್ತರ ನೀಡದೆ ಜಾರಿಕೊಳ್ಳುವ ಕೆಲಸ ಮಾಡ್ತಿದಾರೆ. ಭದ್ರತೆ ಕಾಪಾಡುವಲ್ಲಿ ಚನ್ನಿ ಸರ್ಕಾರ ಅಟ್ಟರ್ ಫ್ಲಾಪ್ ಆಗಿದೆ ಎಂದು ಮನವಿ ಪತ್ರದಲ್ಲಿ ಖಟ್ಟರ್ ಬರೆದಿದ್ದಾರೆ.