Cinema

ಯಶ್‌ಗೆ ಇಂದು 36ನೇ ಹುಟ್ಟು ಹಬ್ಬದ ಸಂಭ್ರಮ

ಬೆಂಗಳೂರು : ನ್ಯಾಷನಲ್‌ ಸ್ಟಾರ್ ಆಗಿ ಬೆಳೆದಿರುವ ರಾಕಿಂಗ್‌ ಸ್ಟಾರ್‌ ಯಶ್‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಯಶ್‌ ಹುಟ್ಟು ಹಬ್ಬಕ್ಕೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.

ಯಶ್‌ ಅಭಿಮಾನಿಗಳು ಪ್ರತಿ ವರ್ಷ ಯಶ್‌ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರು. ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಈ ಅದ್ದೂರಿತನಕ್ಕೆ ಬ್ರೇಕ್‌ ಬಿದ್ದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಶುಭಾಷಯ ಕೋರಿ ಹುಟ್ಟು ಹಬ್ಬ ಆಚರಿಸುತ್ತಿರುವ ಅಭಿಮಾಣಿಗಳು ಈ ವರ್ಷ ಕಾಮನ್‌ ಡಿಪಿಯನ್ನು ಸಹ ಬಿಡುಗಡೆ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ ಇರುವ ಸಿಡಿಪಿ.

ಕೆಜಿಎಫ್‌ ಸಿನಿಮಾ ಮೂಲಕ ಭಾರತಾದ್ಯಂತ ಹೆಸರು ಮಾಡಿರುವ ಯಶ್‌ ಅವರ ಕೆಜಿಎಫ್‌ ೨ ಸಿನಿಮಾಗೆ ಭಾರತಾದ್ಯಂತ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಹೇಳಿದಂತೆ ನಡೆಯುವ ಯಶ್‌ ಅವರ ಗುಣ ಎಲ್ಲರಿಗೂ ಅಚ್ಚುಮೆಚ್ಚು.

ಕನ್ನಡ ಸಿನಿಮಾಗಳ ಕಡೆ ಇಡೀ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ ಯಶ್‌ ಅವರ ಮುಂದಿನ ಸಿನಿಮಾ ಯಾವುದು ? ಮುಂದಿನ ನಡೆ ಏನು ಎಂಬುದು ಮಾತ್ರ ಇನ್ನು ಗೌಪ್ಯವಾಗಿಯೇ ಇದೆ. ಕೆಜಿಎಫ್‌ ೨ ರಿಲೀಸ್‌ ನಂತರವಷ್ಟೇ ಇದಕ್ಕೆಲ್ಲಾ ಉತ್ತರ ಸಿಗಲಿದೆ.

Share Post