CrimeNational

ಶಿಕ್ಷಕಿಯ ಖಾಸಗಿ ವಿಡಿಯೋ ತೋರಿಸಿದ ಬ್ಲ್ಯಾಕ್‌ಮೇಲ್‌; 4 ವಿದ್ಯಾರ್ಥಿಗಳು ಅರೆಸ್ಟ್‌!

ಆಗ್ರಾ (ಉತ್ತರಪ್ರದೇಶ); ಶಿಕ್ಷಕರನ್ನು ದೇವರಿಗೆ ಸಮಾನ ಎಂದು ಹೇಳುತ್ತಾರೆ.. ಆದ್ರೆ ಇತ್ತೀಚಿನ ದಿನಗಳಲ್ಲಿ ಗುರು ಶಿಷ್ಯರ ಸಂಬಂಧವೇ ಹಾಳಾಗುತ್ತಿದೆ.. ಗುರು-ಶಿಷ್ಯರೇ ಲೈಂಗಿಕ ಸಂಬಂಧ ಹೊಂದುವ, ಮದುವೆಯಾಗುವ ಘಟನೆಗಳು ನಡೆಯುತ್ತಲೇ ಇರುತ್ತವೆ.. ಇನ್ನು ಇಲ್ಲಿ ವಿದ್ಯಾರ್ಥಿಗಳು ತಮಗೆ ಪಾಠ ಹೇಳಿಕೊಡುವ ಶಿಕ್ಷಕಿ ಸ್ನಾನ ಮಾಡುವ ದೃಶ್ಯಗಳನ್ನು ಚಿತ್ರೀಕರಿಸಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.. ಈ ಕಾರಣಕ್ಕಾಗಿ ಪೊಲೀಸರು ನಾಲ್ವರು ವಿದ್ಯಾರ್ಥಿಗಳನ್ನು ಅರೆಸ್ಟ್‌ ಮಾಡಿದ್ದಾರೆ..
ಉತ್ತರ ಪ್ರದೇಶದ ಆಗ್ರಾದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. 10ನೇ ತರಗತಿ ವಿದ್ಯಾರ್ಥಿ ಹಾಗೂ ಆತನ ಮೂವರು ಸ್ನೇಹಿತರು ಈ ಕೆಲಸ ಮಾಡಿದ್ದಾರೆ.. ಶಿಕ್ಷಕಿ ತಮ್ಮದೇ ಮನೆಯಲ್ಲಿ ವಿದ್ಯಾರ್ಥಿಗಳು ಟ್ಯೂಷನ್‌ ಹೇಳಿಕೊಡುತ್ತಿದ್ದರು.. ಹೀಗಾಗಿ ಆರೋಪಿ ವಿದ್ಯಾರ್ಥಿ ಅವರ ಮನೆಗೆ ಬಂದು ಹೋಗುತ್ತಿದ್ದ.. ಇದೇ ವೇಳೆ ಆತ ಶಿಕ್ಷಕಿ ಸ್ನಾನ ಮಾಡುತ್ತಿದ್ದಾಗ ಅದರ ದೃಶ್ಯಗಳನ್ನು ಚಿತ್ರೀಕರಿಸಿದ್ದ.. ನಂತರ ಅದನ್ನು ಶಿಕ್ಷಕಿಗೆ ತೋರಿಸಿ ತನ್ನ ಜೊತೆ ಹಾಸಿಗೆ ಹಂಚಿಕೊಳ್ಳುವಂತೆ ಶಿಕ್ಷಕಿಗೆ ಬ್ಲ್ಯಾಕ್‌ ಮೇಲ್‌ ಮಾಡೋದಕ್ಕೆ ಶುರು ಮಾಡಿದ್ದ.. ಆದ್ರೆ ಶಿಕ್ಷಕಿ ಅದಕ್ಕೆ ಒಪ್ಪದಿದ್ದರಿಂದ ಆರೋಪಿ ತನ್ನ ಮೂವರು ಸ್ನೇಹಿತರಿಗೆ ಶಿಕ್ಷಕಿ ಸ್ನಾನ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದ..
ಅನಂತರ ಆ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲೂ ಹಂಚಿಕೊಳ್ಳಲಾಗಿತ್ತು.. ಇದರಿಂದ ಮನನೊಂದ ಶಿಕ್ಷಕಿ ಆತ್ಮಹತ್ಯೆಗೂ ಯತ್ನಿಸಿದ್ದರು.. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ..

Share Post