National

ಹಾಡು ಹಾಡುತ್ತಲೇ ಮಲಯಾಳಿ ಗಾಯಕ ಸಾವು..!

ತಿರುವನಂತಪುರಂ; ಮಲಯಾಳಂ ಗಾಯಕ ಎಡವ ಬಶೀರ್‌ ವೇದಿಕೆ ಮೇಲೆ ಹಾಡು ಹಾಡುತ್ತಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ, ಅಲಪ್ಪುಳ ಜಿಲ್ಲೆಯಲ್ಲಿ ನಡೆದ ಬ್ಲ್ಯೂ ಡೈಮಂಡ್ಸ್‌ ಆರ್ಕೇಸ್ಟ್ರಾದ ಸಮಾರಂಭದಲ್ಲಿ ಈ ದುರ್ಘಟನೆ ನಡೆದಿದೆ.

 

ಗಾಯಕ ಎಡವ ಬಶೀರ್‌ಗೆ ಎಂಬತ್ತೇಳು ವರ್ಷ ವಯಸ್ಸಾಗಿತ್ತು.  ಕೇರಳದಲ್ಲಿ ನಡೆಯುವ ಆರ್ಕೆಸ್ಟ್ರಾಗಳಲ್ಲಿ ಹಾಡು ಹಾಡುವ ಮೂಲಕ ಎಡವ ಬಶೀರ್ ಹೆಚ್ಚು ಜನಪ್ರಿಯರಾಗಿದ್ದರು. ನಿನ್ನೆ ರಾತ್ರಿ ನಡೆದ ಕಾರ್ಯಕ್ರಮದಲ್ಲಿ 1978ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರದ ಪ್ರಸಿದ್ಧ ಗೀತೆ ʻಮಾನ ಹೋ ತುಮ್ ಬೇಹದ್ ಹಸೀನ್ʼ ಹಾಡನ್ನು ಹಾಡುತ್ತಿದ್ದರು. ಈ ವೇಳೆ ಅವರು ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

Share Post