National

ನನಗೆ ವ್ಯಾಕ್ಸಿನ್ನೂ ಬೇಡ..ಏನೂ ಬೇಡ: ಮರವೇರಿ ವ್ಯಕ್ತಿಯ ಕಪಿಚೇಷ್ಟೆ

ಪಾಂಡಿಚೆರಿ: ಕೊರೊನಾ ನಿಯಂತ್ರಣಕ್ಕೆ ಬ್ರೇಕ್‌ ಹಾಕಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಜನರ ಆರೋಗ್ಯದ ದೃಷ್ಟಿಯಿಂದ ವೈರಸ್‌ ವಿರುದ್ದ ಹೋರಾಡಲು ವಿಜ್ಞನಿಗಳು ವ್ಯಾಕ್ಸಿನ್‌ ಕಂಡುಹಿಡಿದು ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡುವ ಗುರಿ ಹೊಂದಿದೆ. ಇದರಲ್ಲಿ ಯಶಸ್ವಿ ಕೂಡ ಆಗಿದೆ. ಈಗ ೧೨-೧೮ ವರ್ಷದೊಳಗಿನ ಮಕ್ಕಳಿಗೂ ವ್ಯಾಕ್ಸಿನ್‌ ಅಭಿಯಾನಕ್ಕೆ ಮೋದಿ ಜನವರಿಗೆ ಮೋದಿ ಚಾಲನೆ ನೀಡಲಿದ್ದಾರೆ. ಹೀಗಿರುವಾಗ ಇನ್ನೂ ವ್ಯಾಕ್ಸಿನ್‌ ಪಡೆಯದೆ ಕೆಲವು ಜನ ಕಪಿಚೇಷ್ಟೆ ಮಾಡ್ತಿದಾರೆ.

ಪಾಂಡೀಚೆರಿಯ ವಿಲ್ಲನೂರ್​ ಎನ್ನುವ ಗ್ರಾಮದಲ್ಲಿ ಮನೆಯ ಬಾಗಿಲಿಗೆ ಆರೋಗ್ಯ ಕಾರ್ಯಕರ್ತೆಯರು ವ್ಯಾಕ್ಸಿನ್‌ ನೀಡಲು ಬಂದ ವೇಳೆ ವ್ಯಕ್ತಿಯೊಬ್ಬ ಮನೆಯ ಎದುರಿದ್ದ ಮರವೇರಿ ಕುಳಿತು, ನನಗೆ ಯಾವ ವ್ಯಾಕ್ಸಿನ್‌ ಬೇಡ ನೀವು ಇಲ್ಲಿಂದ ಹೋಗಿ ಎಂದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ವ್ಯಕ್ತಿಯ ಆಟಾಟೋಪಕ್ಕೆ ದಿಕ್ಕುತೋಚದೆ ಆರೋಗ್ಯ ಕಾರ್ಯಕರ್ತೆಯರು ಸುಮ್ಮನಾದರು. ಪಾಂಡೀಚೇರಿ ಸರ್ಕಾರ 100 ರಷ್ಟು ವ್ಯಾಕ್ಸಿನೇಷನ್​ ಡ್ರೈವ್​ ನಡೆಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಆರೋಗ್ಯ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ವ್ಯಾಕ್ಸಿನ್‌ ನೀಡ್ತಿದ್ದಾರೆ.

Share Post