Crime

ಕಸದ ಬುಟ್ಟಿಯಲ್ಲಿ ಸ್ಫೋಟ; ಇಬ್ಬರು ಮಕ್ಕಳಿಗೆ ಗಾಯ

ಬಿಧಾನ್‌ ನಗರ: ಪಶ್ಚಿಮ ಬಂಗಾಳದ ಬಿಧಾನ್‌ನಗರದಲ್ಲಿ ಕಸದ ಬುಟ್ಟಿಯಲ್ಲಿ ಸ್ಫೋಟದ ಸಂಭವಿಸಿದ್ದು, ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ನಯಾ ಪ್ಯಾಟಿ ಎಂಬಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳಿಗೆ ಬಿಧಾನ್‌ ನಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಿಧಾನ್ ನಗರ ಪೂರ್ವ ಪೊಲೀಸ್ ಠಾಣೆ ಪ್ರದೇಶದ ಸಾಲ್ಟ್ ಲೇಕ್ ಸ್ವಿಸ್ ಗೇಟ್ ಮುಂಭಾಗದ ಕಸದ ಬುಟ್ಟಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಸಾಲ್ಟ್ ಲೇಕ್ ನಯಾಪಟ್ಟಿ ಪ್ರದೇಶದ ಹಲವಾರು ಮಕ್ಕಳು ಆಡುತ್ತಿದ್ದರು. ಈ ವೇಳೆ ಕಸದ ಬುಟ್ಟಿಯಲ್ಲಿ ಸ್ಫೋಟವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

Share Post