CrimeNational

ಮಂತ್ರಿ ಮಗನ ಅಟ್ಟಹಾಸಕ್ಕೆ ಬಾಲಕನ ಸ್ಥಿತಿ ಚಿಂತಾಜನಕ: ಜನರ ಆಕ್ರೋಷಕ್ಕೆ ಕಾರು ಪೀಸ್‌ ಪೀಸ್‌

ಬಿಹಾರ:  ಹೆತ್ತವರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಮಕ್ಕಳು ಇಷ್ಟ ಬಂದಂತೆ ಬೀಗುತ್ತಿರುತ್ತಾರೆ. ಇದಕ್ಕೆ ಬಿಹಾರದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಮಕ್ಕಳ ಮೇಲೆ ಬಿಹಾರ ಪ್ರವಾಸೋದ್ಯಮ ಸಚಿವರ ಮಗ ಗನ್‌ನಿಂದ ಶೂಟ್‌ ಮಾಡಿದ್ದು ಬಾಳಕನ ಪರಿಸ್ಥಿತಿ ಚಿಂತಾಜನಕವಾಗಿದೆ. ಬಿಹಾರದ ಪಶ್ಚಿಮ ಚಂಪಾರನ್‌ ಜಿಲ್ಲಾ ಬೆತಿಯಾ ಸಮೀಪದ ಹರ್ದಿಯಾ ಎಂಬಲ್ಲಿ ಸಚಿವ ನಾರಾಯಣ ಪ್ರಸಾದ್‌ ಅವರ ನಿವಾಸವಿದೆ. ಅಲ್ಲಿಯೇ ಪಕ್ಕದಲ್ಲಿ ಒಂದು ಮಾವಿನ ತೋಟವಿದ್ದು, ಮಕ್ಕಳು ಆಟವಾಡುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಂತ್ರಿ ಮಗ ಬಬ್ಲೂ ಪ್ರಸಾದ್‌ ಮಕ್ಕಳನ್ನು ಅಲ್ಲಿಂದ ಹೋಗುವಂತೆ ಜೋರು ಧ್ವನಿಯಲ್ಲಿ ಎಚ್ಚರಿಸಿದ್ದಾನೆ. ಇವನ ಗೊಡ್ಡು ಬೆದರಿಕೆಗಳ ಬಗ್ಗದ ಮಕ್ಕಳು ಅಲ್ಲಿಯೇ ಆಟವಾಡುವುದನ್ನು ಮುಂದುವರೆಸಿದ್ದಾರೆ. ಮಕ್ಕಳಿಗೆ ಅಲ್ಲಿನ ಸ್ಥಳೀಯರು ಕೂಡ ಸಹಾಯ ಮಾಡಿದ್ದಾರೆ.

ಇದರಿಂದ ಕೋಪಗೊಂಡ ಬಬ್ಲೂ ಪ್ರಸಾದ್‌ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ. ಉದ್ರಿಕಗತನಾದ ಸಚಿನವ ಮಗ ನಾಲ್ಕು ವಾಹನಗಳಲ್ಲಿ ತನ್ನ ಅನುಚರರನ್ನು ಕರೆದುಕೊಂಡು ಬಂದು ಅಲ್ಲಿದ್ದವರ ಮೇಲೆ ದಾಳಿ ನಡೆಸಿದ್ದಾನೆ. ಕೋಪದಲ್ಲಿ ಕೈಯಲ್ಲಿದ್ದ ಪಿಸ್ತೂಲಿನಿಂದ ಫೈರ್‌ ಮಾಡಿದ್ದಾನೆ. ಸ್ಥಳದಲ್ಲಿದ್ದ ನಾಲ್ಬರಿಗೆ ಗಂಭೀರ ಗಾಯಗಳಾಗಿವೆ. ಜನಾರ್ದನ್‌ ಎಂಬ ಬಾಲಕನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಮಂತ್ರಿ ಮಗ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸಚಿವರ ಮನೆಗೆ ನುಗ್ಗಿ ದಾಂಧಲೆ ನಡೆದಸಿದ್ದಾರೆ. ಮಂತ್ರಿ ಮಗ ತಪ್ಪಿಸಿಕೊಂಡಿದ್ದರಿಂದ ರೊಚ್ಚಿಗೆದ್ದ ಜನ ಅಲ್ಲಿದ್ದ ಕಾರುಗಳನ್ನು ಪೀಸ್‌ ಪೀಸ್‌ ಮಾಡಿದ್ದಾರೆ. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಗಲಾಟೆಯನ್ನು ತಿಳಿಗೊಳಿಸುವಲ್ಲಿ ಸಫಲರಾದರು. ಮಂತ್ರಿ ಮನೆಯಲ್ಲಿದ್ದ ಒಂದು ಪಿಸ್ತೂಲ್‌ ಹಾಗೂ ಪಂದು ರೈಫಲ್‌ ಅನ್ನು ವಶಕ್ಕೆ ಪಡೆದಿದ್ದಾರೆ. ತಪ್ಪಿಸಿಕೊಂಡಿರು ಮಂತ್ರಿ ಮಗನಿಗಾಘಿ ಹುಡುಕಾಟ ನಡೆಸಿದ್ದಾರೆ.

Share Post