National

NEWS X ಕನ್ನಡ ನ್ಯೂಸ್‌ ಪೋರ್ಟಲ್‌ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

ರಾಷ್ಟ್ರೀಯ ಸುದ್ದಿ ವಾಹಿನಿಗಳ ಸಮೂಹ ITV NETWORK ನೂತನವಾಗಿ ಆರಂಭಿಸಿರುವ newsxkannada.com ಕನ್ನಡ ನ್ಯೂಸ್‌ ಪೋರ್ಟಲ್‌ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ಬೆಂಗಳೂರಿನ ಸಿಎಂ ಅಧಿಕೃತ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಲಾಂಚ್‌ ಬಟನ್‌ ಒತ್ತುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ, ನ್ಯೂಸ್‌ ಎಕ್ಸ್‌ ಕನ್ನಡ ಡಿಜಿಟಲ್‌ ಮಾಧ್ಯಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನ್ಯೂಸ್‌ ಎಕ್ಸ್‌ ಎಕ್ಸಿಕ್ಯೂಟಿವ್‌ ಎಡಿಟರ್‌ ಆರ್.‌ ಜಯಪ್ರಕಾಶ್‌ ಉಪಸ್ಥಿತರಿದ್ದರು.


ITV NETWORK. ದೇಶದ ಪ್ರತಿಷ್ಠಿತ ಹಾಗೂ ಬೃಹತ್‌ ಸುದ್ದಿ ಮಾಧ್ಯಮ ಸಮೂಹಗಳಲ್ಲೊಂದು. ೨೦೦೭ರಲ್ಲಿ ಶ್ರೀ ಕಾರ್ತಿಕೇಯನ್‌ ಶರ್ಮಾ ಅವರು ITV NETWORKನ್ನು ಪ್ರಾರಂಭಿಸಿದರು. ಇದರಲ್ಲಿ News X ರಾಷ್ಟ್ರೀಯ ಸುದ್ದಿವಾಹಿನಿಯೂ ಒಂದು. NEWS.. NOT NOISE ಧ್ಯೇಯ ವಾಕ್ಯದೊಂದಿಗೆ ಪ್ರಾರಂಭವಾದ ನ್ಯೂಸ್‌ ಎಕ್ಸ್‌ ಇಂಗ್ಲೀಷ್‌ ಸುದ್ದಿವಾಹಿನಿ, ನೇರ, ನಿಷ್ಠುರ ಸುದ್ದಿಗಳಿಗೆ ಇಡೀ ದೇಶದಲ್ಲೇ ಹೆಸರಾಗಿದೆ. ಇದಲ್ಲದೆ, INDIA NEWS ಹೆಸರಿನಲ್ಲಿ ಏಳು ಪ್ರಾದೇಶಿಕ ಸುದ್ದಿ ವಾಹಿನಿಗಳು ಕಾರ್ಯ ನಿರ್ವಹಿಸುತ್ತಿವೆ. ಹರ್ಯಾಣ, ಮಧ್ಯಪ್ರದೇಶ, ಛತ್ತಿಸ್‌ ಗಢ, ಪಂಜಾಬ್‌, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್‌ನಲ್ಲಿ INDIA NEWS ಹೆಸರಿನಲ್ಲಿ ಪ್ರಾದೇಶಿ ಸುದ್ದಿವಾಹಿನಿಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲವೂ ಆಯಾ ರಾಜ್ಯಗಳಲ್ಲಿ ಜನಪ್ರಿಯವಾಗಿವೆ. ಇನ್ನು SUNDAY GAURDIAN ಎಂಬ ಇಂಗ್ಲೀಷ್‌ ಭಾನುವಾರದ ಪತ್ರಿಕೆ ಕೂಡಾ ದೇಶದಲ್ಲಿ ಸಾಕಷ್ಟು ಹೆಸರು ಮಾಡಿದೆ. ಚಂಡಿಗಢ್‌ನಲ್ಲಿ AAJ SAMAAJ ಹೆಸರಿನ ಪ್ರಮುಖ ಹಿಂದಿ ದಿನಪತ್ರಿಕೆ ಕೂಡಾ ITV NETWORK ಅಡಿಯಲ್ಲೇ ನಡೆಯುತ್ತಿದೆ. ಇದಲ್ಲದೆ, ನ್ಯೂಸ್‌ ಎಕ್ಸ್‌ ಇಂಗ್ಲೀಷ್‌ ನ್ಯೂಸ್‌ ಪೋರ್ಟಲ್‌ ಕೂಡಾ ITV ಸಂಸ್ಥೆಯ ಒಂದು ಭಾಗವಾಗಿದೆ. ಉತ್ತರ ಭಾರತದ ಸುದ್ದಿ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿರುವ ITV NETWORK ಇದೀಗ ದಕ್ಷಿಣ ಭಾರತಕ್ಕೂ ಕಾಲಿಡುತ್ತಿದೆ. ಮೊದಲ ಹಂತವಾಗಿ www.newsxkannada.com ಹೆಸರಿನ ಕನ್ನಡ ನ್ಯೂಸ್‌ ಪೋರ್ಟಲ್‌ ಲೋಕಾರ್ಪಣೆಯಾಗಿದೆ.

Share Post