National

ಕಾಂಗ್ರೆಸ್‌ ಸಂಸ್ಥಾಪನಾ ದಿನ: ಕೆಳಗೆ ಬಿದ್ದ ಕಾಂಗ್ರೆಸ್‌ ಧ್ವಜ

ದೆಹಲಿ: ಇಂದು ೧೩೭ ನೇ ಕಾಂಗ್ರೆಸ್‌ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದಾರೆ.ಈ ವೇಳೆ ಬಾರಿ ಯಡವಟ್ಟು ನಡೆದಿದ್ದು, ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ. ಕಾಂಗ್ರೆಸ್‌ ಕಚೇರಿ ಮುಂಭಾಗ ಸೋನಿಯಾ ಗಾಂಧಿ ಪಕ್ಷದ ಧ್ವಜ ಹಾರರಿಸಲು ಮುಂದಾದ್ರು. ಈ ವೇಳೆ ಸಿಬ್ಬಂದಿಯೊಬ್ಬರು ಧ್ವಜವನ್ನು ಜೋರಾಗಿ ಎಳೆದ ಪರಿಣಾಮ ಹಗ್ಗ ತುಂಡಾಗಿದ್ದು, ಸೋನಿಯಾ ಅವರ ಕೈ ಮೇಲೆ ಬಿದ್ದಿದೆ. ಪಕ್ಷದ ಕಾರ್ಯಕರ್ತರು ಬಂದು ಸೋನಿಯಾ ಬಳಿ ಇದ್ದ ಧ್ವಜವನ್ನು ತೆಗೆದುಕೊಂಡು ಹೋಗಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.
ಇನ್ನು ಇದಕ್ಕೆ ವಿರೊಧ ಪಕ್ಷದವರು ವ್ಯಂಗ್ಯವಾಡುತ್ತಿದ್ದಾರೆ. ಇದೀಗ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಟ್ವೀಟ್‌ ಮೂಲಕ ಟೀಕೆ ಮಾಡಿದ್ದಾರೆ.

Share Post