ಸಿಡಿಎಸ್‌ನ ಮುಂದಿನ ಉತ್ತರಾಧಿಕಾರಿ ಯಾರು..?
ದೆಹಲಿ: ಚೀಫ್ ಡಿಫೆನ್ಸ್ ಸ್ಟಾಫ್ ಬಿಪಿನ್ ರಾವತ್ ಅವರ ಅಕಾಲಿಕ ಮರಣದಿಂದಾಗಿ ಸಿಡಿಎಸ್‌ನ ಉತ್ತರಾಧಿಕಾರಿಯನ್ನು ಅತೀ ಶೀಘ್ರದಲ್ಲಿ ಆಯ್ಕೆ ಮಾಡುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ರಾವತ್ ಅವರು ಡಿಸೆಂಬರ್ ೩೧, ೨೦೨೧ರ ವರೆಗೆ ಅಧಿಕಾರಾವಧಿಯನ್ನು ಹೊಂದಿದ್ರು, ಆದ್ರೀಗ ಅವರಿಂದ ತೆರವಾದ ಸ್ಥಾನಕ್ಕೆ ೭ರಿಂದ ೧೦ ದಿನಗಳ ಒಳಗಾಗಿ ಮತ್ತೊಬ್ಬ ಸಿಡಿಎಸ್‌ರನ್ನು ನೇಮಕ ಮಾಡುವ ಹೊಣೆ ಸರ್ಕಾರದ ಮೇಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭದ್ರತಾ ಸಭೆ ನಡೆಸಲಾಗಿದ್ದು, ಹೊಸ ಚೀಫ್ ಡಿಫೆನ್ಸ್ ಸ್ಟಾಫ್ ಆಗಿ ಜನರಲ್ ಮನೋಜ್ ಮುಕುಂದ್ ನರವಾಣಿ ಅವರನ್ನು ನೇಮಕ ಮಾಡಲು ಅಭಿಪ್ರಾಯ ಕಲೆ ಹಾಕಿದ್ದಾರೆ ಎಂಬ ಮಾಹಿತಿಯಿದೆ.