ದುರಂತವನ್ನು ಕಣ್ಣಾರೆ ಕಂಡವರು ಹೇಳಿದ್ದೇನು..?
ಕೂನೂರು: ೭ ನಿಮಿಷದಲ್ಲಿ ಲ್ಯಾಂಡ್ ಆಗಬೇಕಿದ್ದ ಚಾಪರ್ ಕೆಳಗೆ ಬಿದ್ದಿದ್ದೇಗೆ..? ಎಂಬುದನ್ನು ಅಲ್ಲಿ ವಯಸ್ಸಾಗಿದ್ದ ಹಿರಿಯಬ್ಬೊರು ವಿವರಿಸಿದ್ದು ಹೀಗೆ…. ನಾನು ಸರಿಯಾಗಿ ನೋಡಿದೆ, ಮೇಲೆ ಹಾರುತ್ತಿದ್ದ ಹೆಲಿಕಾಪ್ಟರ್ ಬರುಬರುತ್ತಾ ಮರದ ಕಡೆ ತಿರುಗಿತು. ಮರದ ಮೇಲಿಂದ ಒಂದು ಅಡಿ ಮೇಲಕ್ಕೆ ಡಿಕ್ಕಿ ಹೊಡೆದ ಕೂಡಲೇ ದೊಡ್ಡದಾಗಿ ಶಬ್ದ ಬಂತು ಕೂಡಲೇ ಎಲ್ಲರೂ ಅಲ್ಲಿಗೆ ಓಡಿದ್ರು, ಆದ್ರೆ ಯಾರನ್ನು ರಕ್ಷಿಸಲಾಗಲಿಲ್ಲ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿಯುತ್ತಿತ್ತು, ನನಗೆ ಕಾಲು ಸರಿಯಿಲ್ಲದ ಕಾರಣ ಕೂತಲ್ಲಿಂದಲ್ಲೇ ಎಲ್ಲವನ್ನೂ ಗಮನಿಸಿದೆ. ಸೇನಾ ತಂಡ ಬಂದ ಮೇಲೆ ರಕ್ಷಣಾ ಕಾರ್ಯವನ್ನು ಮಾಡಿದ್ರು ಎಂದು ನಡೆದ ಘಟನೆಯನ್ನು ಸ್ಥಳೀಯರೊಬ್ಬರು ವಿವರಿಸಿದ್ರು.