National

ಹೀರಾಬೆನ್‌ಗೆ ನೂರನೇ ವರ್ಷದ ಹುಟ್ಟುಹಬ್ಬ; ಶುಭ ಕೋರಿದ ಮೋದಿ

ಗಾಂಧೀನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಅವರು ಇಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಶತಾಯುಷಿಯಾದ ತಾಯಿ ಹೀರಾಬೆನ್‌ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿ ಶುಭಕೋರಿದರು. ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಗುಜರಾತ್‌ ರಾಜಧಾನಿ ಗಾಂಧೀನಗರದಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಮೋದಿ, ತಾಯಿಯ ಹುಟ್ಟುಹಬ್ಬವನ್ನು ಆಚರಿಸಿದರು.

ತಮ್ಮ ತಾಯಿಗೆ ಸಿಹಿ ತಿನಿಸಿ ಜನ್ಮದಿನದ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ನಂತರ ತಾಯಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.  ಹೀರಾಬೆನ್ ಅವರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಪ್ರಾಪ್ತವಾಗಲಿ ಎಂದು ಹಾರೈಸಿ ಮೋದಿ ಅವರ ಹುಟ್ಟೂರು ವಡನಗರದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Share Post