CrimeNational

ವೃದ್ಧನಿಗೆ ಡಿಕ್ಕಿ ಹೊಡೆದು ದೇಹವನ್ನು 5 ಕಿಮೀ ಎಳೆದೊಯ್ದ ರೈಲು!

ಹೈದರಾಬಾದ್; ವೃದ್ಧನೊಬ್ಬನಿಗೆ ಡಿಕ್ಕಿ ಹೊಡೆದ ರೈಲೊಂದು ದೇಹವನ್ನು ಐದು ಕಿಲೋಮೀಟರ್‌ವರೆಗೆ ಎಳೆದೊಯ್ದ ದಾರುಣ ಘಟನೆ ನಡೆದಿದೆ.. ತೆಲಂಗಾಣದ ಬಿಬಿ ನಗರ-ಘಟಕೇಸರ್‌ ನಗರದ ನಡುವಿನ ಮಾರ್ಗದಲ್ಲಿ ಈ ಘಟನೆ ನಡೆದಿದೆ.. ಅಪರಿಚಿತ ವೃದ್ಧನೊಬ್ಬ ರೈಲು ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ..

ವರಂಗಲ್- ಸಿಂಕಿದರಾಬಾದ್​​ನ ಎಂಎಂಟಿಎಸ್ ರೈಲಿಗೆ ಸಿಲುಕಿ ವೃದ್ಧ ಭೀಕರವಾಗಿ ಸಾವನ್ನಪ್ಪಿದ್ದಾನೆ.. ರೈಲಿನ ಮುಭಾಗ ವೃದ್ಧನ ದೇಹ ಸಿಕ್ಕಿಕೊಂಡಿದ್ದು, ಐದು ಕಿಲೋ ಮೀಟರ್‌ವರೆಗೆ ಮೃತದೇಹವನ್ನು ರೈಲು ಎಳೆದೊಯ್ದಿದೆ.. ಘಟಕೇಸರ್ ನಿಲ್ದಾಣದ ಬಳಿ ವೃದ್ಧನ ದೇಹವನ್ನು ಸಿಆರ್​ಪಿಎಫ್​ ಸಿಬ್ಬಂದಿ ಹೊರತೆಗೆದಿದ್ದು, ಅವರ ಮುಖ ಗುರುತು ಸಿಗದಂತಾಗಿದೆ..

 

Share Post