National

ಹುತಾತ್ಮನಾದ ಮಗನ ನೆನಪಿಗಾಗಿ ಸ್ಮಾರಕ ನಿರ್ಮಿಸಿದ ಹೆತ್ತಮ್ಮ

ಛತ್ತೀಸ್‌ಗಢ: ಇಲ್ಲಿನ  ಜಶ್‌ಪುರ ಜಿಲ್ಲೆಯಲ್ಲಿ ಹುತಾತ್ಮ ಯೋಧನ ತಾಯಿ ತನ್ನ ಮಗನ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಿದ್ದಾರೆ. ಇದುವರೆಗೂ ಈ ಊರಿನ ಹೆಸರು ಯಾರಿಗೂ ತಿಳಿದಿರಲಿಲ್ಲ.  ಸ್ಮಾರಕ ನಿರ್ಮಾಣವಾದ ದಿನದಿಂದ ಇದು ನಕ್ಷಲ್‌ ದಾಳಿಯಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡ ಜವಾನನ ಊರು ಎಂದೇ ಪ್ರಸಿದ್ದವಾಗಿದೆ. ಅಂದಹಾಗೆ ಈ ಊರಿನ  ಹೆಸರು ಪೆರವಾನರ. ಸರ್ಕಾರ ಸ್ಮಾರಕ ನಿರ್ಮಿಸುವುದಾಗಿ ಭರವಸೆ ನೀಡಿ ಎರಡು ವರ್ಷ ಕಳೆದರೂ ಯಾವುದೇ ಅಭಿವೃದ್ದಿ ಕಾಣಲಿಲ್ಲ. ಹಾಗಾಗಿ ಕುಟುಂಬದ ಸದಸ್ಯರು ತಮ್ಮ ಸ್ವಂತ ಖರ್ಚಿನಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಇಡೀ ಗ್ರಾಮದ ಜನರು ಈ ಸ್ಮಾರಕವನ್ನು ಗೌರವಿಸುತ್ತಾರೆ. ಹುತಾತ್ಮ ಯೋಧನ ತಾಯಿ ಪ್ರತಿ ಹಬ್ಬಕ್ಕೆ  ಸ್ಮಾರಕವನ್ನು ಸ್ವಚ್ಛಗೊಳಿಸುತ್ತಾರೆ. ನಿನ್ನೆ ಗಣರಾಜ್ಯೋತ್ಸವ ಅಂಗವಾಗಿ ಸ್ಮಾರಕವನ್ನು ಸ್ವಚ್ಛಗೊಳಿಸಿ ಅಲಂಕಾರ ಮಾಡಿದ್ದಾರೆ.

ಜವಾನ್ ಬಶಿಲ್ ಟೊಪ್ಪೊ 2011ರಲ್ಲಿ ನಕ್ಸಲೀಯರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದರು.‌ ಈ ಬಗ್ಗೆ ಯೋಧನ ತಾಯಿ ಮಾತನಾಡುತ್ತಾ  ನಾನು ಅವನನನು ಮಗ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದರು. ಪ್ರತಿ ರಾಖಿ ಹಬ್ಬದಂದು ಯೋಧನ ಸಹೋದರಿಯರು ಸ್ಮಾರಕದ ಬಳಿ ಬಂದಯ ರಾಖಿ ಕಟ್ಟುತ್ತಾರಂತೆ. ವಿಶೇಷ ಸಂದರ್ಭಗಳಲ್ಲಿ ಊರಿನ ಜನ ಯೋಧನ ತ್ಯಾಗವನ್ನು ನೆನಪು ಮಾಡಿಕೊಳ್ಳುತ್ತಾರಂತೆ.

ಸ್ಮಾರಕವನ್ನು ಊರಿನ ಮಧ್ಯಭಾಗ ಶಾಲೆ ಬಳಿ ನಿರ್ಮಾಣ ಮಾಡಲಾಗಿದೆ.  ಈ ಗ್ರಾಮವು ಜಶ್ಪುರ್ ಜಿಲ್ಲೆಯ ಫರ್ಸಾಬಿಹಾರ್ ಬ್ಲಾಕ್ ಅಡಿಯಲ್ಲಿ ಬರುತ್ತದೆ. ಕೆಲ ವರ್ಷಗಳ ಹಿಂದೆ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ವರದಿಯಾಗಿತ್ತು.  ವರದಿಗೆ ಎಚ್ಚೆತ್ತ ಕೂಡಲೇ ಆಡಳಿತ ಮಂಡಳಿ ಗ್ರಾಮದಲ್ಲಿ ಒಂದಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಿದೆ.

 

Share Post