ಪರೀಕ್ಷೆ ಬರೆಯಲು ಹೋದ ಗಂಡ; ಪ್ರಿಯಕರನನ್ನು ಕರೆಸಿಕೊಂಡ ಹೆಂಡತಿ!
ಉತ್ತರಪ್ರದೇಶ; ಇತ್ತೀಚೆಗೆ ಅಕ್ರಮ ಸಂಬಂಧಗಳ ಕಾರಣದಿಂದ ಹಲವಾರು ಅನಾಹುತಗಳು ನಡೆಯುತ್ತಿರುತ್ತವೆ.. ಅದೇ ರೀತಿ ಉತ್ತರ ಪ್ರದೇಶದಲ್ಲಿ ಒಂದು ಘಟನೆ ನಡೆದಿದೆ.. ಇಲ್ಲಿ ಗಂಡ ಪೊಲೀಸ್ ನೇಮಕಾತಿ ಪರೀಕ್ಷೆ ಬರೆಯಲು ಹೋಗಿದ್ದಾನೆ.. ಇದೇ ಸಮಯವೆಂದು ಕಾದಿದ್ದ ಹೆಂಡತಿ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ.. ಬೆಡ್‌ರೂಮ್‌ನಲ್ಲಿ ಇಬ್ಬರೂ ಚಕ್ಕಂದ ಆಡಲು ಶುರು ಮಾಡಿದ್ದಾರೆ.. ಕೊನೆಗೆ ಇಬ್ಬರೂ ಸಿಕ್ಕಿಬಿದ್ದಿದ್ದಾರೆ..
ಇದನ್ನೂ ಓದಿ; ಕೈಗೆ ಗಾಯ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ!; ಏನಾಯ್ತು..?
ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.. ಗಂಡ ಪೊಲೀಸ್ ನೇಮಕಾತಿಗೆ ಅರ್ಜಿ ಹಾಕಿದ್ದು, ಅದರ ಪರೀಕ್ಷೆ ಇದ್ದಿದ್ದರಿಂದ ಪರೀಕ್ಷೆ ಬರೆಯಲು ಹೋಗಿದ್ದ.. ಇದೇ ಸಮಯ ನೋಡಿಕೊಂಡಿದ್ದ ಹೆಂಡತಿ ತನ್ನ ಪ್ರಿಯಕರನನ್ನು ಬೆಡ್‌ರೂಮಿಗೆ ಕರೆಸಿಕೊಂಡಿದ್ದಾಳೆ.. ಇಬ್ಬರು ಪ್ರಣಯದಾಟದಲ್ಲಿ ಮೈಮರೆತಿರುವಾಗಲೇ ಕೊಠಡಿಯಿಂದ ಏನೋ ಸದ್ದಾಗಿದೆ.. ಇದರಿಂದಾಗಿ ಮನೆಯವರು ಬೆಡ್‌ರೂಮಿಗೆ ಹೋಗಿ ನೋಡಿದ್ದಾರೆ.. ಈ ವೇಳೆ ಇಬ್ಬರೂ ಸಿಕ್ಕಿಬಿದ್ದಿದ್ದಾರೆ..
ಗಂಡ ಬೇರೆ ಊರಿಗೆ ಪರೀಕ್ಷೆ ಬರೆಯಲು ಹೋಗಿದ್ದ.. ಮನೆಯಲ್ಲಿ ಅತ್ತೆ, ಮಾವ ಇದ್ದರು.. ಆದ್ರೆ ಅರ್ಧ ರಾತ್ರಿಯಲ್ಲಿ ಮಹಿಳೆ ತನ್ನ ಪ್ರಿಯಕರನನ್ನು ಕದ್ದು ಮುಚ್ಚಿ ಕರೆಸಿಕೊಂಡಿದ್ದಾಳೆ… ರೂಮಿನಿಂದ ಏನೋ ಸದ್ದು ಬರುತ್ತಿರುವುದನ್ನು ಗಮಿಸಿದ ಅತ್ತೆ, ಮಾವ ಕಿಟಕಿಯಿಂದ ನೋಡಿದ್ದಾರೆ.. ಆಗ ಯಾರೋ ವ್ಯಕ್ತಿ ಇರುವುದು ಗೊತ್ತಾಗಿದೆ.. ಕೂಡಲೇ ಬಾಗಿಲು ತೆಗೆಸಿ ನೋಡಿದಾಗ ಸೊಸೆ ಬೇರೆ ವ್ಯಕ್ತಿ ಜೊತೆ ಇದ್ದುದು ಕಂಡುಬಂದಿದೆ..
ಅದೇ ಕೋಪದಲ್ಲಿ ಇಬ್ಬರನ್ನೂ ಹಿಗ್ಗಾಮುಗ್ಗಾ ಥಳಿಸಲಾಗಿದೆ.. ಕೂಡಲೇ ಆ ಪ್ರಿಯಕರ ಅಲ್ಲಿಂದ ಪರಾರಿಯಾಗಿದ್ದಾನೆ.. ಮನೆಯವರು ಪೊಲೀಸರಿಗೆ ದೂರು ಕೊಟ್ಟಿದ್ದು, ಯುವಕನನ್ನು ಇದೀಗ ಬಂಧಿಸಲಾಗಿದೆ..